ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊರ್ವನ ಮೇಲೆ ಚಾಕು ಇರಿಯಲು ಮುಂದಾಗಿದ್ದ ಯುವಕರ ಮೇಲೆಯೇ ಅದೇ ಚಾಕುವಿನಿಂದ ವಾಪಾಸ್ ಚಾಕು ಇರಿದಿರುವ ಘಟನೆ ಸಂತೋಷನಗರದ ಜೆ.ಕೆ.ಸ್ಕೂಲ್ ಹತ್ತಿರ ಜರುಗಿದೆ.
ಘಟನೆಯಲ್ಲಿ ಭೀಮಪ್ಪ ಗೊಲ್ಲರ್, ಕಿರಣ ಕಬ್ಬೇರ್ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ರಹಮಾನ್ ಎಂಬಾತ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಈ ಮೂವರು ಸ್ನೇಹಿತರಾಗಿದ್ದು, ಪ್ರತಿನಿತ್ಯ ಜೊತೆಯಲ್ಲಿ ಓಡಾಟ ಮಾಡುತ್ತಿದ್ದರು, ಅದರಂತೆ ಇಂದು ಸಂಜೆ ಕೂಡಾ ಜೊತೆಯಲ್ಲಿ ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ತಂಟೆ ನಡೆದಿದ್ದು, ಭಿಮ್ಮಪ್ಪ ಗೊಲ್ಲರ, ಕಿರಣ ಕಬ್ಬೇರ ಎಂಬಾತರು ರೆಹಮಾನ್ ಮೇಲೆ ಚಾಕು ಇರಿಯಲು ಮುಂದಾಗಿದ್ದಾರೆ. ಆಗ ರೆಹಮಾನ್ ಅದೇ ಚಾಕುವನ್ನು ಕಸಿದು ವಾಪಸ್ ಚುಚ್ಚಿದ್ದಾನೆಂದು ಹೇಳಲಾಗುತ್ತಿದೆ. ಪರಿಣಾಮ ಭೀಮಪ್ಪ, ಕಿರಣನ ಕುತ್ತಿಗೆ, ಕಣ್ಣಿನ ಹುಬ್ಬಿಗೆ ಗಾಯಗಳಿಗೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಅಶೋಕ ನಗರದ ಪೋಲಿಸರು ಘಟನಾ ಸ್ಥಳ ಹಾಗೂ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡವರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಈ ಘಟನೆ ಅಶೋಕ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.