ಹುಬ್ಬಳ್ಳಿ: ವಾಕಿಂಗ್ ಮಾಡಲು ಹೋಗಿದ್ದ ಪೋಲಿಸ್ ಪೇದೆಯೊಬ್ಬರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಏ.24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶರೀಫ್’ಸಾಬ ಬೆನ್ನೂರ (52) ಎಂಬಾತರೇ ಕಾಣೆಯಾದ ಹೆಡ್ ಕಾನಸ್ಟೇಬಲ್ ಆಗಿದ್ದು, ಇವರು ಕಮರಿಪೇಟೆ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಕಾರವಾಡ ರಸ್ತೆಯ ಪೋಲಿಸ್ ಕ್ವಾಟರ್ಸ್’ದಲ್ಲಿನ ನಿವಾಸದಿಂದ ಎಂದಿನಂತೆ ಬೆಳಿಗ್ಗೆ ವಾಕಿಂಗ್’ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ.
ಕಾಣೆಯಾದ ಶರೀಫ್’ಸಾಬ ಕುರಿತು ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರು ಸಹ ಈವರೆಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ ಉಪನಗರ ಪೋಲಿಸ್ ಠಾಣೆಯಲ್ಲಿ ನಾಪತ್ತೆಯ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಶರೀಫ್’ಸಾಬ ಬೆನ್ನೂರು ಚಹರೆ ಪಟ್ಟಿಯುಳ್ಳ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಫೋನ್ ನಂ- 0836-2233517/ 9480802030 ಅಥವಾ ಹು-ಧಾ ಸಿಟಿ ಕಂಟ್ರೋಲ್ ರೂಮ್ ನಂಬರ್ 0836-2233555/521/100/112 ಗೆ ಕರೆ ಮಾಡಲು ಪೋಲಿಸರು ತಿಳಿಸಿದ್ದಾರೆ.