
ಹುಬ್ಬಳ್ಳಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಬಳಿಯಲ್ಲಿ ಸಂಭವಿಸಿದೆ.
ಹುಬ್ಬಳ್ಳಿಯಲ್ಲಿ ಮದುವೆ ಜವಳಿ ಕಾರ್ಯ ಮುಗಿಸಿಕೊಂಡು ಗೊಬ್ಬರಗುಂಪಿಗೆ ಹೊರಟ್ಟಿದ ಕುಟುಂಬದ ಕಾರಿಗೆ, ಕೂಡಲಗೇರಿಯಿಂದ ಶಿಗ್ಗಾಂವಿಯತ್ತ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಮದುವೆ ಜವಳಿಗೆ ಬಂದಿದ್ದ ಕಲ್ಲನಗೌಡ (57), ರತ್ನಾ (50), ಬಸನಗೌಡ (15), ಬಸನಗೌಡ (65), ನಾಗನಗೌಡ (29), ಬಸವರಾಜ ಎಂಬಾತರಿಗೆ ಗಾಯಗಳಾಗಿವೆ.
ಇನ್ನೂ ಮತ್ತೊಂದು ಕಾರಿನಲ್ಲಿದ್ದ ಸಿದ್ದಪ್ಪ ಅರಗೋಳ, ಚಂದ್ರು ಪಾಟೀಲ್ ಎಂಬಾತರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1