ಕೊಟಗೊಂಡಹುಣಸಿಯಲ್ಲಿ ಸಂಭ್ರಮದ ರಂಗಪಂಚಮಿ ಆಚರಣೆ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಇಂದು (ಶನಿವಾರ) ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಂಜಾನೆಯಿಂದಲೇ ಮಕ್ಕಳು ತರ ತರಹದ ಬಣ್ಣಗಳನ್ನು ತಯಾರಿಸಿಕೊಂಡು ಪಿಚಕಾರಿಗಳ ಮೂಲಕ ಸಿಂಪಡಿಸುವ ದೃಶ್ಯ ಸಾಮಾನ್ಯವಾಗಿದ್ದರೇ, ಯುವಕರು ಒಣ ಬಣ್ಣವನ್ನೇ ತಲೆಗೆ ಮುಖಕ್ಕೆ ಬಳಿಯುತ್ತಿದ್ದರು.
ನೆತ್ತಿ ಸುಡುವ ಬಿಸಿಲಿನಲ್ಲೂ ಮಕ್ಕಳು, ಹಿರಿಯರು, ಕಿರಿಯರೆನ್ನದೆ ಬಣ್ಣದ ಜೊತೆಗೆ ಒಬ್ಬರ ಮೇಲೋಬ್ಬರು ತೊಡಗಿದ್ದು ಕಂಡುಬಂತು.
ಗ್ರಾಮದ ಪ್ರಮುಖ ಕಾಮದೇವರು: ಗ್ರಾಮದಲ್ಲಿ ಪ್ರಮುಖವಾಗಿ ಊರಿನ ಕೇಂದ್ರ ಸ್ಥಳದಲ್ಲಿ ಹೆಬ್ಬಳ್ಳಿ ಅವರ ಮನೆತನ ಸರ್ಕಾರಿ ಕಾಮಣ್ಣನನ್ನು ಶುಕ್ರವಾರ ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಿತು.

ಅದರಂತೆ ತಳವಾಳ ಓಣಿಯಲ್ಲಿ ಸೋಲಾರಗೊಪ್ಪ ಕುಟುಂಬದಿಂದ ಕಾಮದೇವರನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇನ್ನಿತರ ಕಡೆಗಳಲ್ಲಿಯೂ ಕಾಮದೇವರು ಪ್ರತಿಷ್ಠಾಪಿಸಿ, ಶುಕ್ರವಾರ ಊರಿನವರು ವಿಶೇಷ ಪೂಜೆ ಸಲ್ಲಿಸಿದರು.

ಇಂದು ಬೆಳಿಗ್ಗೆ ಊರಿನ ವಿವಿಧೆಡೆ ಪ್ರತಿಷ್ಠಾಪಿಸಿ ಪೂಜಿಸಲಾಗಿದ್ದ ಕಾಮದೇವನನ್ನು ಶ್ರದ್ದಾಭಕ್ತಿಯಿಂದ ದಹನ ಮಾಡಲಾಯಿತು.