
ಹುಬ್ಬಳ್ಳಿ: ಡಿಕೆಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವುದು ನಮ್ಮ ಕನಸಾಗಿದೆ. ಇದಕ್ಕಾಗಿ ಜೈನ್ ಆಚಾರ್ಯರು ಆರ್ಶೀವಾದ ನೀಡುತ್ತೇವೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದ್ದಾರೆ.
ಇಲ್ಲಿನ ವರೂರು ಗ್ರಾಮದ ನವಗ್ರಹ ಜೈನ ತೀರ್ಥಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ತಿರತ್ತಾರಾ? ಅವರು ಕಷ್ಟಪಟ್ಟಿದ್ದಾರೆ. ಶ್ರಮ ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಜೀವಾ ಕೊಟ್ಟಿದ್ದಾರೆ. ಇದನ್ನು ಕರ್ನಾಟಕದ ಜನತೆ ಮರೆಯೋದಿಲ್ಲ ಎಂದರು.
ಅವರೊಬ್ಬ ಧರ್ಮನಿಷ್ಠ, ತ್ಯಾಗ ನಿಷ್ಠ, ನಮ್ಮ ಕನಸು ಡಿಕೆಶಿ ಮುಖ್ಯಮಂತ್ರಿ ಆಗುವುದು ಎಂದು ತಿಳಿಸಿದರು.
ಇನ್ನು ಜೈನ ಧರ್ಮಿಯರಿಗೆ ನಿಗಮ ಮಂಡಳಿಯನ್ನು ಸರ್ಕಾರ ಮಾಡಿಕೊಡಬೇಕು. ಯಾವಾಗಲೂ ಕೊಡುವ ಕೈಗಳಾದ ಜೈನರು ಇದೇ ಮೊದಲ ಬಾರಿಗೆ ಸರ್ಕಾರದ ಬಳಿ ನಿಗಮ ಮಂಡಳಿಗೆ ಕೈಚಾಚಿದೆ ಇದನ್ನು ಸರ್ಕಾರ ಮಾಡಿಕೊಡಬೇಕು ಎಂದು ಹೇಳಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1