ಶಾಂತಿ, ಸಮಾನತೆ ಸಂದೇಶ: ದಲೈ ಲಾಮಾ ಜಿಯನ್ನು ಭೇಟಿಯಾದ ಅಂಬೇಡ್ಕರ್ ಸೇವಾ ಸಮಿತಿ ಪ್ರತಿನಿಧಿಗಳು

ಮುಂಡಗೋಡ್ / ಉತ್ತರ ಕನ್ನಡ:
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ (ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತರು) ಶಾಖಾ ಕಚೇರಿ, ಹನುಮಾಪುರ–ಹೊಸಮನಿ (ತಾ. ಮುಂಡಗೋಡ್) ವತಿಯಿಂದ ಪರಮಪೂಜ್ಯ ಗುರೂಜಿ, ಗೌರವಾನ್ವಿತ ದಲೈ ಲಾಮಾ ಜಿಯನ್ನು ಭೇಟಿ ಮಾಡುವ ಸೌಭಾಗ್ಯ ಲಭಿಸಿದೆ.
ಸಮಿತಿಯ ರಾಜ್ಯಾಧ್ಯಕ್ಷ ಯಲ್ಲಪ್ಪ ಫಕ್ಕೀರಪ್ಪ ಹೊಸಮನಿ ಅವರ ನೇತೃತ್ವದ ನಿಯೋಗವು ದಲೈ ಲಾಮಾ ಜಿಯವರನ್ನು ಭೇಟಿಯಾಗಿ, ಸಂಘದ ಸಾಮಾಜಿಕ, ಶೈಕ್ಷಣಿಕ ಹಾಗೂ ಮಾನವೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿತು. ಈ ವೇಳೆ ದಲೈ ಲಾಮಾ ಜಿಯವರು ಸಮಿತಿಯ ಕಾರ್ಯವನ್ನು ಮೆಚ್ಚಿ, ಶಾಂತಿ, ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆಯಲ್ಲಿ ಮುಂದುವರಿಯುವಂತೆ ಆಶೀರ್ವಾದ ನೀಡಿದರು.
ಈ ಮಹತ್ವದ ಭೇಟಿಯಲ್ಲಿ ರಾಘವೇಂದ್ರ ಮರೆಪ್ಪ ತಪಲಾದವರ್, ನಾಗೇಂದ್ರ ಯಲ್ಲಪ್ಪ ತಾತಾವರ, ಈರಪ್ಪ ಸುಂಕಪ್ಪ ಉಸಾರಿ, ಕೃಷ್ಣ ಪುಟ್ಟಪ್ಪ ವಾಸನ್, ಕಿರಣ್ ಪರಶುರಾಮ್ ಕಲಾಲ್, ಗರಿಬದಿವಾನ್ ಗುಡುಸಾಬ್ ನೆಗಳೂರು, ಬಿ. ದಾದಾಪೀರ್ ಬಾಬಾಜಾನ್ ದುಕಂಧರ್, ಮಾರುತಿ ಗೋಪಿ ಲಮಾಣಿ, ಫಕ್ಕೀರಪ್ಪ ಹೆಚ್. ದುಮ್ಮದ್, ತಿಮ್ಮಣ್ಣ ಹನುಮಂತಪ್ಪ ಭೋವಿವಡ್ಡರ, ರಮೇಶ ಫಕ್ಕೀರಪ್ಪ ಕಟ್ಟಿಮನಿ, ಬಸವರಾಜ ಗುಡ್ಡಪ್ಪ ವಾಲ್ಮೀಕಿ, ಪ್ರಕಾಶ ಕೆ. ಖಾನಾಪುರಿ, ಯಮನೂರು ಬಿಸನಳ್ಳಿ ಹಾಗೂ ಮಹಮ್ಮದ್ ರಫೀಕ್ ನದಾಫ್ ಉಪಸ್ಥಿತರಿದ್ದರು.
ದಲೈ ಲಾಮಾ ಜಿಯವರ ಆಶೀರ್ವಾದದಿಂದ ಸಂಘದ ಸದಸ್ಯರಲ್ಲಿ ಹೊಸ ಉತ್ಸಾಹ ಮತ್ತು ಪ್ರೇರಣೆ ಮೂಡಿದ್ದು, ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವುದಾಗಿ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ವರದಿ ಶಶಿಕಾಂತ್ ಕೊರವರ




