ಮುಂಡಗೋಡಿನ ಟಿಬೆಟಿಯನ್ ಕ್ಯಾಂಪ್‌ನಲ್ಲಿ ಹುಲಿ ಸುದ್ದಿ ಸುಳ್ಳು – ಅರಣ್ಯಾಧಿಕಾರಿ ಸ್ಪಷ್ಟನೆ
ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವದಂತಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಇದರ ಪರಿಣಾಮವಾಗಿ ಮುಂಡಗೋಡ್ ಪಟ್ಟಣ ಸೇರಿದಂತೆ ಟಿಬೆಟಿಯನ್ ಕ್ಯಾಂಪ್ ನಿವಾಸಿಗಳು ಹಾಗೂ ಸುತ್ತಮುತ್ತಲಿನ 19 ಹಳ್ಳಿಗಳ ಜನರು ಭಯ ಮತ್ತು ಆತಂಕಕ್ಕೆ ಒಳಗಾಗಿದ್ದರು. ಕೆಲವೊಂದು ಚಿತ್ರಗಳು ಹಾಗೂ ವಿಡಿಯೋಗಳು ವೈರಲ್ ಆಗಿ ಜನರಲ್ಲಿ ಗೊಂದಲವನ್ನುಂಟುಮಾಡಿದ್ದವು.
ಈ ಕುರಿತು ಸ್ಪಷ್ಟನೆ ನೀಡಿದ ಮುಂಡಗೋಡಿನ ಅರಣ್ಯಾಧಿಕಾರಿ, ಅಪ್ಪರಾವ್ kಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲ ಚಿತ್ರಗಳು ಹಾಗೂ ಮಾಹಿತಿಗಳು ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾಗಿವೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ತಂಡದಿಂದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಟಿಬೆಟಿಯನ್ ಕ್ಯಾಂಪ್ ಅಥವಾ ಸುತ್ತಮುತ್ತಲಿನ ಯಾವುದೇ ಪ್ರದೇಶದಲ್ಲಿ ಹುಲಿ ಸಂಚಾರದ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.
ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳು ಮತ್ತು ಅಪಪ್ರಚಾರಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಜೊತೆಗೆ, ಶಾಂತಿ ಕಾಪಾಡಿಕೊಂಡು ಸಹಕರಿಸಬೇಕು ಎಂದು ಜನತೆಗೆ ಅಧಿಕಾರಿಗಳು ಕರೆ ನೀಡಿದ್ದಾರೆ.
ವರದ.ಶಶಿಕಾಂತ ಕೂರವರ




