
ಮುಂಡಗೋಡ: ದ್ವೇಷ ಭಾಷಣ ವಿದೇಯಕ, ಹಿಂಪಡಿಯುವಂತೆ ಆಗ್ರಹಿಸಿ ಇಂದು ಶ್ರೀರಾಮ ಸೇನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿತು.
ರಾಜ್ಯ ಸರಕಾರ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಲು ಮಂಡಿಸಿದ ದ್ವೇಷ ಭಾಷಣ ವಿದೇಯ, ಹಿಂದೂ ವಾಕ್ ಧಾರ್ಮಿಕ ಹಕ್ಕಿನ ಕಗ್ಗೋಲೆ ಎಂದು ಶ್ರೀರಾಮ ಸೇನೆ ಮುಂಡಗೋಡ ತಾಲೂಕಾ ಅಧ್ಯಕ್ಷ ಮಂಜುನಾಥ ಎಚ್.ಪಿ ವಿರೋದ ವ್ಯಕ್ತಪಡಿಸಿದರು.
ಮಸೂದೆಯಿಂದ ಹಿಂದು ಮುಖಂಡರು, ಮಠಾದೀಶರು, ಶೋಭಾ ಯಾತ್ರೆಗಳಲ್ಲಿ ಭಾಷಣ ಮಾಡುವ ಮುಖಂಡರಿಗೆ ಕಟ್ಟಿ ಹಾಕುವ ಪ್ರಯತ್ನ ಇದಾಗಿದೆ, ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆಗಳ ಮೇಲೆ ಬಲ ಪ್ರಹಾರ ಮಾಡುತ್ತಿದೆ, ಈ ಮಸೂದೆಯು ಆರ್ಟಿಕಲ್ 19(1)(a) ವಾಕ್ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಯ ಹಕ್ಕಿಗೆ ನೇರ ವಿರೋಧವಾಗಿದೆ ಎಂದರು.
ತಹಶೀಲ್ದಾರ ಉಪಸ್ಥಿತಿಯಲ್ಲಿ ಸಿರಸ್ಥೇದಾರ ಪ್ರಕಾಶ ಚಲಾವಾದಿ ಅವರಿಗೆ ಮನವಿ ಪತ್ರ ಸಲ್ಲಿಸುವರದರ ಮೂಲಕ ದ್ವೇಷ ಬಾಷಣ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.
ಸುರೇಶ ಕಲ್ಲೋಳ್ಳಿ, ಮುಂಜುನಾಥ ಹಿರೇಮಠ, ಶ್ರೀಧರ್ , ರವಿ ತಳವಾರ, ಕಿರಣ ತಳವಾರ, ಶಿವು ಮತ್ತಿತರರು ಉಪಸ್ಥೀತರಿದ್ದರು.
ವರದಿ : ವೆಂಕಟೇಶ ದಾಸರ



