ರಂಗನಾಥ ನೀಲಮ್ಮನವರ ಬಲಿಷ್ಠ ಕಾರ್ಯಾಚರಣೆ: ಮುಂಡಗೋಡಕ್ಕೆ ಡ್ರಗ್ಸ್ ಮುಕ್ತಿಯ ಹೆಜ್ಜೆ
ಮುಂಡಗೋಡ: ಪಟ್ಟಣದ ಯುವ ಕ್ರೈಂ ಟೀಂ ಭರ್ಜರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಚರಸ್ ಸಾಗಿಸುತ್ತಿದ್ದ ಒಬ್ಬ ಶಂಕಿತನನ್ನು ಬಂಧಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು ₹8 ಲಕ್ಷ ಮೌಲ್ಯದ 781 ಗ್ರಾಂ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಂಡಗೋಡ ಪಟ್ಟಣದ ಸುಭಾಷನಗರದ ಸಚಿನ್ ಟೆಕ್ಬಹದ್ದೂರ ಗೋರ್ಖಾ ಬಂಧಿತ ಆರೋಪಿ. ಲಾಭದಾಸೆಯಿಂದ ಯಾವುದೇ ಪರವಾನಗಿ ಇಲ್ಲದೇ, ನಿಷೇಧಿತ ಮಾದಕ ವಸ್ತುವಾದ ಚರಸ್ ಅನ್ನು ಹಿರೋ ಸ್ಪ್ಲೆಂಡರ್ ಬೈಕ್ನಲ್ಲಿ ಸಾಗಿಸುತ್ತಿದ್ದ ಆರೋಪಿಯ ಮೇಲೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದ ಮೇಲೆ ಶಿರಸಿ–ಹುಬ್ಬಳ್ಳಿ ರಾಜ್ಯ ಹೆದ್ದಾರಿ–69 ರ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ದಾಳಿ ನಡೆಸಿ ಆರೋಪಿ ಬಂಧಿಸಲಾಯಿತು.
ಪರಿಶೀಲನೆಯ ವೇಳೆ ಆರೋಪಿಯ ಬಳಿ 781 ಗ್ರಾಂ ತೂಕದ ಚರಸ್ ಪತ್ತೆಯಾಗಿದ್ದು, ಅದರ ಮಾರುಕಟ್ಟೆ ಮೌಲ್ಯ ಸುಮಾರು ₹8,00,000 ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಸಹ ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯನ್ನು ಪೋಲೀಸ್ ಇನ್ಸ್ಪೆಕ್ಟರ್ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿ.ಎಸ್.ಐ ಯಲ್ಲಾಲಿಂಗ ಕುನ್ನುರ ಹಾಗೂ ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಮಹಾಂತೇಶ ಕುಂದೋಳ, ಅಣ್ಣಪ್ಪ ಬಡಿಗೇರ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಗುರು ಬಿಶಟ್ಟಪ್ಪನವರ ಯಶಸ್ವಿಯಾಗಿ ಕೈಗೊಂಡಿದ್ದಾರೆ
ಬಂಧಿತನ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ ಶಶಿಕಾಂತ್ ಕೊರವರ




