ಜಿಲ್ಲೆ

ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ” — NWKRTC ಆಕಾಂಕ್ಷಿಗಳ ಧರಣಿ ಸತ್ಯಾಗ್ರಹ

ಹುಬ್ಬಳ್ಳಿ: NWKRTC ಸಂಸ್ಥೆಯ ಅಭ್ಯರ್ಥಿಗಳು ಇಂದು ನಗರದ ಗೋಕುಲ್ ರಸ್ತೆಯಲ್ಲಿರುವ NWKRTC ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದರು.
ಸರ್ಕಾರವು 2019ರಲ್ಲಿ 20819 ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ ಕೇವಲ 1000 ಅಭ್ಯರ್ಥಿಗಳನ್ನಷ್ಟೇ ಆಯ್ಕೆ ಮಾಡಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಆಯ್ಕೆಯಾದವರಲ್ಲಿ 500 ಮಂದಿ ಎಸ್‌ಸಿ ಅಭ್ಯರ್ಥಿಗಳು ಹಾಗೂ ಉಳಿದ 500 ಮಂದಿ ಇತರೆ ಪಂಗಡದವರಾಗಿದ್ದಾರೆ ಎಂದು ತಿಳಿಸಿದರು.
ಅಧಿಸೂಚನೆಯಲ್ಲಿ ಬ್ಯಾಕ್‌ಲಾಕ್ ಸೇರಿ 2008–19 ಅಭ್ಯರ್ಥಿಗಳನ್ನು ನೇಮಕ ಮಾಡಬೇಕೆಂದು ಸ್ಪಷ್ಟವಾಗಿ ಉಲ್ಲೇಖವಿದ್ದರೂ, ಸರ್ಕಾರ ಕೇವಲ ಸಾವಿರ ಮಂದಿಯನ್ನು ಮಾತ್ರ ಆಯ್ಕೆ ಮಾಡಿದೆ ಎಂಬ ಕಾರಣದಿಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಲಿಲ್ಲ. ಕೇವಲ ಆಶ್ವಾಸನೆಯ ಮಾತುಗಳನ್ನಾಡಿ ನಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದರು.
“ನಮಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ. ಈ ಸತ್ಯಾಗ್ರಹ ನಮ್ಮ ಹಕ್ಕಿಗಾಗಿ, ನಮ್ಮ ಭವಿಷ್ಯಕ್ಕಾಗಿ,” ಎಂದು  ಕಾರ್ಯನಿರತ ಅಧ್ಯಕ್ಷ ಚನ್ನವೀರ ಹೇಳಿದರು.
ವರದಿ: ಶಶಿಕಾಂತ್ ಕೊರವರ್, ಹುಬ್ಬಳ್ಳಿ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button