ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಸಂಭ್ರಮದ 70ನೇ ಕನ್ನಡ ರಾಜ್ಯೋತ್ಸವ
ಹುಬ್ಬಳ್ಳಿ: ಹುಬ್ಬಳ್ಳಿ ಈಶ್ವರ ನಗರದಲ್ಲಿ ಸಂಭ್ರಮದ 70ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಅಭಿಮಾನಿಗಳು ಆಚರಿಸಿದರು.

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಸಾಹಿತಿಗಳಾದ ಎಂ ಆರ್ ನದಾಫ್ ಇವರ ನೇತೃತ್ವದಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಈಶ್ವರ ನಗರದ ಹಿರಿಯರಾದ ಪವಾರ್. ಎಂ.ಹೆಚ್ ಕಾಗಿನಲ್ಲಿ, ಗದಿಗೆಪ್ಪ ನಾಯಕ್, ರಮೇಶ್ ತಂಗೋಡಿ, ಜೈ ಭೀಮ್ ಸೇನಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹನುಮಂತ ಸೋಮನಪಲ್ಲಿ, ಮಂಗಳೇಶಪ್ಪ ಬಂಡಿ ಹಾಗೂ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರೇ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಅಂಗಡಿ, ಅಭಿಷೇಕ್ ನಾಯಕ್, ವೀಣ್ ಬಡಿಗೇರ್ ಮತ್ತು ವಿದ್ಯಾರ್ಥಿಗಳು 70ನೇಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಎಲ್ಲ ಮುಖಂಡರು ಮತ್ತು ಗಣ್ಯರು ಹೂ ಪುಷ್ಪ ಸಲ್ಲಿಸಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರೊ ಗಂಗಾಧರ್ ಎಸ್ ಮರಳಿಹಳ್ಳಿ, ಕನ್ನಡ ಭಾಷೆ, ಕನ್ನಡ ನಾಡು ನುಡಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕನ್ನಡ ಅಭಿಮಾನವನ್ನು ಮೆರೆಯಬೇಕು. ಕನ್ನಡ ಭಾಷೆಯನ್ನ ಉಳಿಸಬೇಕು. ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂದು ಹೇಳಿದರು.
ನಂತರ ಮಾತಾಡಿದೆ ಸಾಹಿತಿಗಳಾದ ಎಂ .ಆರ್. ನದಾಫ್, ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಬೇಕು, ಕರ್ನಾಟಕದ ಕನ್ನಡ ಭಾಷೆಯನ್ನು ಅಭಿಮಾನದಿಂದ ಕಲಿತು ಕನ್ನಡವನ್ನು ಎಲ್ಲರಿಗೂ ಕಲಿಸಿಕೊಡಬೇಕೆಂದು ತಿಳಿಸಿದರು.
ಕನ್ನಡದ ಭಾಷೆ ಹಾಗೂ ಸಾಹಿತ್ಯ ಲೋಕಕ್ಕೆ ಹಲವಾರು ಮಾಹಿತಿಗಳು ಕರ್ನಾಟಕಕ್ಕೆ ಕೊಡುಗೆಗಳನ್ನು ನೀಡಿ ಸಾಹಿತ್ಯವನ್ನು ಬೆಳೆಸುವುದರ ಮೂಲಕ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಅದರ ಜೊತೆಗೆ ಕನ್ನಡದ ಅಭಿಮಾನವನ್ನು ಬೆಳೆಸಿದ್ದಾರೆ. ನಾವೆಲ್ಲರೂ ಕನ್ನಡದ ನೆಲಜಲವನ್ನು ಎಲ್ಲರೂ ಉಳಿಸಬೇಕು ಬೆಳೆಸಬೇಕು. ಕನ್ನಡ ರಾಜ್ಯೋತ್ಸವವನ್ನು ಅಭಿಮಾನದಿಂದ ಎಲ್ಲರೂ ಜಾತಿ ಧರ್ಮ ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕೆಂದು ಕಾರ್ಯಕ್ರಮದಲ್ಲಿ ಹೇಳಿದರು.




