ಹುಬ್ಬಳ್ಳಿಯಲ್ಲಿ ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನ 35ನೇ ಪ್ರಮುಖ ಶೋ ರೂಮ್ ಉದ್ಘಾಟನೆ – ಕನ್ನಡ ನಟಿ ರಚಿತಾ ರಾಮ್ ದೀಪ ಬೆಳಗಿಸಿ ಆರಂಭ
ಹುಬ್ಬಳ್ಳಿ: ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯ ಶಾಪಿಂಗ್ ತಾಣವೆಂದೇ ಖ್ಯಾತಿ ಪಡೆದಿರುವ ಸೌತ್ ಇಂಡಿಯಾ ಶಾಪಿಂಗ್ ಮಾಲ್, ಇದೀಗ ಕರ್ನಾಟಕದಲ್ಲೂ ತನ್ನ ಪಾದಾರ್ಪಣೆ ಮಾಡಿದೆ. ಅಕ್ಟೋಬರ್ 15, 2025 ರಂದು ಹುಬ್ಬಳ್ಳಿಯಲ್ಲಿ ಈ ಮಾಲ್ ತನ್ನ 35ನೇ ಪ್ರಮುಖ ಶೋ ರೂಮ್ ಅನ್ನು ಅದ್ದೂರಿಯಾಗಿ ಉದ್ಘಾಟಿಸಿತು.
ಈ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ನಗರದಲ್ಲಿನ ಗಣ್ಯರು, ವ್ಯಾಪಾರ ಲೋಕದ ಪ್ರಮುಖರು ಹಾಗೂ ಹಲವಾರು ಖ್ಯಾತ ವ್ಯಕ್ತಿತ್ವಗಳು ಭಾಗವಹಿಸಿದರು. ಕನ್ನಡದ ಜನಪ್ರಿಯ ನಟಿ ಕುಮಾರಿ ರಚಿತಾ ರಾಮ್ ಅವರು ದೀಪ ಬೆಳಗಿಸುವ ಮೂಲಕ ಶೋ ರೂಮ್ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಚಿತಾ ರಾಮ್ ಅವರು, “ಸೌತ್ ಇಂಡಿಯಾ ಶಾಪಿಂಗ್ ಮಾಲ್‌ನ ಭಾಗವಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ದೊರೆಯುವ ಸೆಲೆಕ್ಷನ್‌ಗಳು ಸಾಂಪ್ರದಾಯಿಕ ರೇಷ್ಮೆಯಿಂದ ಹಿಡಿದು ಆಧುನಿಕ ವಿನ್ಯಾಸದ ವಸ್ತ್ರಗಳವರೆಗೆ ವ್ಯಾಪಕವಾಗಿದ್ದು, ಭಾರತೀಯ ಸಂಸ್ಕೃತಿಯ ಸೌಂದರ್ಯದ ನಿಜವಾದ ಸಂಭ್ರಮಾಚರಣೆಯ ಸಂಕೇತವಾಗಿದೆ,” ಎಂದು ಹೇಳಿದರು.
ಉದ್ಘಾಟನೆಯ ನಂತರ ಸ್ಥಳೀಯ ಗ್ರಾಹಕರು ಮತ್ತು ಅಭಿಮಾನಿಗಳು ಮಾಲ್‌ಗೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿ ಹೊಸ ಶೋರೂಮ್‌ನ ವೈಭವವನ್ನು ಅನುಭವಿಸಿದರು.
ವರದಿ ಶಶಿಕಾಂತ್ ಕೊರವರ




