ಜಿಲ್ಲೆ

ನವನಗರದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿ….

ಹುಬ್ಬಳ್ಳಿ: ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದಲ್ಲಿ ಶ್ರೀ ರಾಮಾಯಣ ಮಹಾಕಾವ್ಯದ ಕರ್ತೃ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ವೇದಿಕೆ ಸಂಘ (ರಿ) ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ವೇಳೆ ಪಾಲಿಕೆ ಸದಸ್ಯರಾದ ಸುನಿತಾ ಮಾಳವದಕರಗ ಮತ್ತು ವೇದಿಕೆಯ ಅಧ್ಯಕ್ಷರಾದ ಲೋಕೇಶ ಜಮ್ಮನಾಳ ವಾಲ್ಮೀಕಿ ಖುಷಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿ, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಈ ವೇಳೆ ಪ್ರೊಫೆಸರ್ ಗಂಗಾಧರ ಮರಳಿಹಳ್ಳಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಖುಷಿಗಳು ಬೇಡರ ಕುಲದಲ್ಲಿ ಜನಿಸಿದ ರತ್ನಾಕರ, ನಾರದ ಮುನಿಗಳ ಆರ್ಶೀವಾದ ಸಪ್ತಾಂಗ ಖುಷಿಗಳ ಮತ್ತು ಬ್ರಹ್ಮದೇವರ ಅನುಗ್ರಹದಿಂದ ರತ್ನಾಕರ, ಶ್ರೀ ಮಹರ್ಷಿ ವಾಲ್ಮೀಕಿ ಬಿರುದು ಪಡೆದು ರಾಮಾಯಣ ಮಹಾಕಾವ್ಯ ರಚನೆ ಮಾಡುವ ಮೂಲಕ ಜಗತ್ತಿನ ಎಲ್ಲ ಧರ್ಮದ ಜನರಿಗೆ ಶ್ರೀ ರಾಮನ ಮಹಿಮೆ ಹಾಗೂ ಕಾಯಕದ ಮಹತ್ವವನ್ನು ಇಡೀ ಲೋಕಕ್ಕೆ ಪರಿಚಯಿಸಿ ವಿಶ್ವ ಗುರು ಆಗಿದ್ದಾರೆ ಎಂದರು.

ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ್ ಮಾತನಾಡಿ, ರಾಮಾಯಣ ವಿಶ್ವದ ಶ್ರೇಷ್ಠ ಮಹಾಕಾವ್ಯ, ಈ ಕಾವ್ಯವನ್ನು ಓದುವ ಮೂಲಕ ಎಲ್ಲರೂ ಭಕ್ತಿಯನ್ನು ಮೆರೆಯಬೇಕು ಎಂದರು‌.

ಇದೇ ವೇಳೆ ಶಾಲಾ ಶಿಕ್ಷಕರು, ಮುಖಂಡರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ರಮೇಶ ತಂಗೋಡಿ, ಮಹಾದೇವಪ್ಪ ಅಳ್ಳಳ್ಳಿ, ಕಿರಣ ಜೈ, ಜೈ ಭೀಮ್ ಸೇನಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಸೋಮನಪಲ್ಲಿ, ರಮೇಶ ಸನ್ನಾಯಕ್, ಕಲ್ಲಪ್ಪ ಬ್ಯಾಟನ್ನವರ, ಪ್ರೋ.ಹನುಮಂತ ತಳವಾರ, ಪ್ರೋ.ಆಕಾಶ, ಶಿವಾನಂದ ಪ್ರೌಢಶಾಲೆಯ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಸಮಾಜದ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button