ಜಿಲ್ಲೆ

ಹೋಟೆಲ್ ಮಾಲೀಕರೊಂದಿಗೆ ಗಲಾಟೆ: ಧಾರವಾಡ ಉಪನಗರ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿ ಅಮಾನತು

ಧಾರವಾಡ,

ರಾತ್ರಿ ಪೆಟ್ರೊಲಿಂಗ್ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಹೋಟೆಲ್ ಮಾಲೀಕರೊಂದಿಗೆ ಗಲಾಟೆ ನಡೆಸಿದ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಯ ಎಎಸ್ಐ ವಿದ್ಯಾನಂದ ಸುಬೇದಾರ್ ಮತ್ತು ಸಿಬ್ಬಂದಿ ರಾಜಪ್ಪ ಕಣಬೂರ್ ಅವರನ್ನು ತಕ್ಷಣವೇ ಅಮಾನತು ಮಾಡಲಾಗಿದೆ.

ದಿನಾಂಕ 28-09-2025ರಂದು ನಡೆದ ಈ ಘಟನೆ ಬಗ್ಗೆ ಸ್ಥಳೀಯ ಹೋಟೆಲ್ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ತನಿಖೆ ಕೈಗೊಂಡರು. ಪ್ರಾಥಮಿಕ ವರದಿಯ ಆಧಾರದ ಮೇಲೆ ಇಲಾಖೆಯ ಶಿಸ್ತು ನಿಯಮಕ್ಕೆ ಧಕ್ಕೆ ತಂದಿರುವುದರಿಂದ ಇಬ್ಬರು ಸಿಬ್ಬಂದಿಗಳ ಮೇಲೆ ಅಮಾನತು ಕ್ರಮ ಜಾರಿಗೊಳಿಸಲಾಗಿದೆ.

ಘಟನೆ ನಂತರ ಸಾರ್ವಜನಿಕರ ವಿಶ್ವಾಸ ಕದಡದಂತೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಈಗ ಪ್ರಕರಣದ ಕುರಿತು ಇಲಾಖೆಯ ಒಳಗಿನ ತನಿಖೆ ನಡೆಯುತ್ತಿದೆ. ಈ ಬೆಳವಣಿಗೆ ಪೊಲೀಸರು ಕರ್ತವ್ಯದಲ್ಲಿರುವಾಗ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುವ ಅಗತ್ಯವಿದೆ ಎಂಬುದನ್ನು ನೆನಪಿಸುತ್ತದೆ.

ವರದಿ ಶಶಿಕಾಂತ್ ಕೊರವರ್

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button