
ಹುಬ್ಬಳ್ಳಿ: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ.
https://www.instagram.com/reel/DPGP4HDEg3E/?igsh=MXF2dzJicjl1ZHhuNw==
ಫಕ್ಕಿರೇಶ ಗುರುಸಿದ್ದಪ್ಪ ರೋಗನ್ನವರ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ಈತ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಕಳೆದ 12 ವರ್ಷಗಳ ಹಿಂದೆ ಈತ ಕುಂದಗೋಳ ತಾಲೂಕಿನ ರಾಮಗೇರಿ ಗ್ರಾಮದ ಮಂಜವ್ವ (ಎಲ್ಲವ್ವ) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಇವರಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಸಹ ಪತ್ನಿ ಮಂಜವ್ವ ಮತ್ತೊರ್ವನ ಜೊತೆಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳಂತೆ.
ಈ ವಿಷಯ ಫಕ್ಕಿರೇಶನಿಗೆ ಗೊತ್ತಾಗಿ ಕುಡಿತದ ಚಟಕ್ಕೆ ದಾಸನಾಗಿದ್ದಾನೆ. ಇದನ್ನೆ ಬಂಡವಾಳ ಮಾಡಿಕೊಂಡ ಪತ್ನಿ ಮಂಜವ್ವ ಗಂಡನಿಗೆ ಕುಡಿದು ಬರುತ್ತಾನೆ ಅಂತಾ ಗಂಡನಿಗೆ ನಿತ್ಯ ಕಿರುಕುಳ ಕೊಟ್ಟಿದ್ದಾಳಂತೆ. ಈ ಬಗ್ಗೆ ಅನೇಕ ಬಾರಿ ಜಗಳ, ಸಂದಾನಗಳಾಗಿವೆಯಂತೆ.
ಕಳೆದ ವಾರವೂ ಸಹಿತ ಫಕ್ಕಿರೇಶ ಮತ್ತು ಮಂಜವ್ವನ ನಡುವೆ ಜಗಳವಾಗಿ ಸಂದಾನವಾಗಿದೆ. ಈ ಇದಾದ ಕೆಲವು ದಿನಗಳಲ್ಲಿ ಫಕ್ಕಿರೇಶ ನೇಣಿಗೆ ಶರಣಾಗಿದ್ದಾನೆ.
https://www.facebook.com/share/v/16mq7gvVWZ/
ಇದೀಗ ಮೃತನ ಕುಟುಂಬಸ್ಥರು ತನ್ನ ಮಗನ ಸಾವಿಗೆ ಆತನ ಪತ್ನಿ ಮಂಜವ್ವ, ಅತ್ತೆ ಸಿದ್ದವ್ವ, ಮಾವ ಹವಳೆಪ್ಪ ನೇರ ಕಾರಣ, ಅವರ ಕಿರುಕುಳ ಹಾಗೂ ಹೆಂಡ್ತಿಯ ಅನೈತಿಕ ಸಂಬಂಧಕ್ಕೆ ಮನನೊಂದು ಫಕ್ಕಿರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟಿದ್ದು, ಮೃತನ ಶವವನ್ನು ಕಿಮ್ಸ್’ಗೆ ರವಾನಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




