ಆಭರಣ ಪ್ರದರ್ಶನ ಮತ್ತು ಮಾರಾಟ- ಚಾಲನೆ ನೀಡಿದ ಶಾಸಕ ಮಹೇಶ್ ತೆಂಗಿನಕಾಯಿ

ಹುಬ್ಬಳ್ಳಿ: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ಸೆ.26 ರಿಂದ ಸೆ.29 ರವರೆಗೆ ಇಲ್ಲಿನ ಗೋಕುಲರಸ್ತೆಯ ಹೊಟೆಲ್ ದಿ.ಫರ್ನ್ ರೆಸಿಡೆನ್ಸಿಯಲ್ಲಿ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಇದಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ತನ್ನ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿದೆ. ಇದರಲ್ಲಿ ವಿವಿಧ ತರಹದ ಆಭರಣಗಳಿದ್ದು, ದಸರಾ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ. ಇದನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಳಿಕ ಮಳಿಗೆ ಮುಖ್ಯಸ್ಥ ಕೆ.ಕೆ.ಪ್ರಸಾದ್ ಮಾತನಾಡಿ, ಕಳೆದ 155 ವರ್ಷಗಳಿಂದ ಆಭರಣ ಪರಂಪರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ದಸರಾ ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿಗರಿಗೆ ಅನುಕೂಲವಾಗಲೆಂದು ನಾಲ್ಕು ದಿನಗಳ ಆಭರಣ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ. ನಮ್ಮ ಸಂಸ್ಥೆ ಜನಪ್ರಿಯ ಕರಕುಶಲತೆ, ಅಪರೂಪದ ರತ್ನದ ಕಲ್ಲುಗಳು ಮತ್ತು ಪರಂಪರೆ ಪ್ರೇರಿತ ವಿನ್ಯಾಸಗಳನ್ನು ನೀಡುತ್ತಿದೆ. ಗ್ರಾಹಕರಿಗೆ ಬೆಳ್ಳಿ ಆವರಣದ ಮೇಲೆ ಶೇ. 2 ರಷ್ಟು, ಚಿನ್ನದ ಆಭರಣಗಳ ಮೇಲೆ ಶೇ.4 ರಷ್ಟು, ವಜ್ರದ ಆಭರಣದ ಮೇಲೆ ಶೇ.6 ರಷ್ಟು ಮತ್ತು 18.69 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿ ಮೇಲೆ ಶೇ. 9 ರಷ್ಟು ವಿಶೇಷ ರಿಯಾಯಿತಿ ಸಹ ನೀಡಲಾಗುತ್ತಿದೆ. ಇದರ ಸದುಪಯೋಗ ಗ್ರಾಹಕರು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮಳಿಗೆಯ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.




