
ಕುಂದಗೋಳ : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರ ಮಗನೇ ಅನುಷ್ಠಾನ ಮಾಡಿ ತನ್ನ ಬ್ಯಾಂಕ್ ಖಾತೆಗೆ 3,37,377 ರೂಪಾಯಿ ಹಣ ಪಡೆದ ಬಗ್ಗೆ “ದಿನವಾಣಿ”ಗೆ ಮಾಹಿತಿ ಲಭ್ಯವಾಗಿದೆ.
ಹೌದು, ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಪಟ್ಟಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆ ಮಾಜಿ ಉಪಾಧ್ಯಕ್ಷರಾದ ಸರೋಜವ್ವಾ ಕಾಳೆ ಎಂಬುವವರ ಮಗ ಪ್ರವೀಣ್ ಕಾಳೆ ಎಂಬಾತನೇ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರೀಕರು ಹಾಗೂ ಓರ್ವ ಸದಸ್ಯರು ಮಾಹಿತಿಯನ್ನು ಮಾಧ್ಯಮದ ಎದುರು ತೆರೆದಿಟ್ಟು ತಮ್ಮ ಹೆಸರನ್ನು ಪ್ರಸ್ತಾಪ ಮಾಡದಂತೆ ಉಚ್ಚರಿಸಿದ್ದಾರೆ.
ವಿಶೇಷವಾಗಿ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಡಪಟ್ಟಿ ಗ್ರಾಮದ ಸದಸ್ಯರ ಮಗ ಪ್ರವೀಣ್ ಕಾಳೆ 15ನೇ ಹಣಕಾಸು ನಿರ್ವಹಣೆಯಲ್ಲಿ 2025 ಜುಲೈ ತಿಂಗಳ 19ನೇ ದಿನಾಂಕದಂದು ಕಾಮಗಾರಿ ನಿರ್ವಹಿಸಿ 4 ಬಿಲ್ ತೆಗೆದಿದ್ದು ಒಟ್ಟು ಹಣ 337377 (ಮೂರು ಲಕ್ಷ ಮೂವತ್ತೇಳು ಸಾವಿರದಾ ಮುನ್ನೂರ ಎಪ್ಪತ್ತೇಳು) ಹಣ ತನ್ನ ಸ್ವಂತ ಖಾತೆಗೆ ಪಡೆದಿದ್ದಾರೆ.
ಈಗಾಗಲೇ ಅಮಾನತುಗೊಂಡಿರುವ ಧರ್ಮಪ್ರಸಾದ್ ಕಾಲವಾಡ ಎಂಬ ಪಿಡಿಓ ಅವಧಿಯಲ್ಲಿ ಈ ಹಣ ಪಡೆಯಲಾಗಿದೆ.

ಈಗಾಗಲೇ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಅವರಿಗೆ ಸ್ಥಳೀಯ ನಾಗರೀಕರು, ಮುಖಂಡರು ಹಾಗೂ ಖಾಸಗಿ ಮಾಧ್ಯಮಗಳು ಪ್ರಶ್ನೆ ಮಾಡಿದರೂ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲಾ.
ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರ ಮಗನೇ ಕಾಮಗಾರಿ ಅನುಷ್ಠಾನ ಮಾಡಿದ್ದು ಜಗಜ್ಜಾಹೀರು ಆದರೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗುತ್ತಿಗೆದಾರರ ರಕ್ಷಣೆ ನಿಂತರಾ ? ಎಂಬ ಮಾತು ಕೇಳಿ ಬಂದಿವೆ.
ಸದ್ಯ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಾಗರೀಕರು ಮುಖಂಡರೇ ಮುಖ್ಯವಾಗಿ ತಮ್ಮ ಆಂತರಿಕ ತಿಕ್ಕಾಟದಿಂದ ಬೇಸತ್ತು ತಮ್ಮ ಗ್ರಾಮ ಪಂಚಾಯಿತಿ ಸಮಸ್ಯೆ ಬಹಿರಂಗ ಪಡಿಸಿದ್ದಾರೆ ಎಂಬುದು ಮಾತ್ರ ಸತ್ಯವಾಗಿದೆ.

ಒಟ್ಟಾರೆ ಜಿಲ್ಲಾ ಪಂಚಾಯತ್ ಸಿಇಒ ಭುವನೇಶ್ ಪಾಟೀಲ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಜುಲೈ 19 ರಂದೇ ಘಟನೆ ನಡೆದು 1 ತಿಂಗಳ ಮೇಲಾದರೂ ತಿಳಿಯದಾಗಿದೆ.




