
ಹುಬ್ಬಳ್ಳಿ: ನಗರದಲ್ಲಿ ಅಂದರ್ ಬಾಹರ್ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಹು-ಧಾ ಮಹಾನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಇಸ್ಪೀಟ್ ಆಟ ಜೋರು ನಡೆಯುತ್ತಿದೆ. ಹೀಗೆ ಅನೇಕ ಕಡೆ ಅನಧಿಕೃತವಾಗಿ ಜೂಜಾಟ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಲಕ್ಷಗಟ್ಟಲೆ ವ್ಯವಹಾರ: ಪ್ರತಿದಿನ ಜೂಜಾಟದಲ್ಲಿ ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಇಸ್ಪೀಟು ದಂಧೆ ಶುರುವಿಟ್ಟುಕೊಂಡಿದ್ದಾರೆ. ಇನ್ನು ಕಾನೂನು ಬಾಹಿರ ಚಟುವಟಿಕೆಯಿಂದ ಹಣ ಸಂಪಾದನೆಗೆ ಕೆಲವರು ಇಳಿದಿದ್ದು, ಇದರಿಂದ ಎಷ್ಟೋ ಜನರ ಬದುಕು ಬೀದಿಗೆ ಬಂದಿದ್ದಾರೆ. ಆದರೂ ಈ ಚಟವನ್ನು ಬಿಡುತ್ತಿಲ್ಲ, ಇನ್ನು ಸ್ಮಶಾನದ ಹಿಂದೆ ನಡೆಯುವ ಈ ದಂಧೆ ಹಿಂದೆ ಜ….ಮಾಲ (ಕಮಾಲ)ನ ಕೃಪಕಟಾಕ್ಷ ಇದೆ ಎಂಬುದು ಗುಪ್ತವಾಗಿ ಉಳಿದಿಲ್ಲ.
ಆದರೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಠಾಣೆಯ ಇನ್ಸ್ಪೆಕ್ಟರ್ ಮಾತ್ರ ಯಾಕೆ ಮೌನಕ್ಕೆ ಜಾರಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.
ಮುಂದಿನ ಸುದ್ದಿಯಲ್ಲಿ ಈ ದಂಧೆಯ ಹಿಂದಿನ ಕಿಂಗ್ ಪಿನ್ ಯಾರು? ಎಲ್ಲಿ ನಡೆಯುತ್ತದೆ? ಯಾರ ಆರ್ಶೀವಾದ ಈ ದಂಧೆಯ ಮೇಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ವಿಡಿಯೋ ಸಮೇತವಾಗಿ ನಿಮ್ಮ “ದಿನವಾಣಿ” ಬಿಚ್ಚಲಿದೆ ನಿರೀಕ್ಷಿಸಿ….




