ಧಾರವಾಡದ ಸೋನಿಯಾ ಪದವಿ ವಿದ್ಯಾಲಯದಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯೋತ್ಸವ

ಧಾರವಾಡ: ಧಾರವಾಡದ ಸೋನಿಯಾ ಶಿಕ್ಷಣ ಸಂಸ್ಥೆಯ ವತಿಯಿಂದ ಸಂಭ್ರಮದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಅಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಸೋನಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಹೆಚ್. ವಿ. ಡಂಬಳ್ ನೆರೆವೇರಿಸಿದರು. ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷರು, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ್ ವ್ಯಕ್ತಿಗಳು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವುದರ ಮೂಲಕ ದೇಶದ ಕೀರ್ತಿ ಪತಾಕಿನ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಅಲ್ಲದೆ ಇವತ್ತಿನ ಯುವಕರು ದೇಶಕ್ಕಾಗಿ ದೇಶ ಪ್ರಗತಿಗಾಗಿ ಒಳ್ಳೆಯ ಶಿಕ್ಷಣವಂತರಾಗಬೇಕು. ದೇಶದ ಕೀರ್ತಿಯನ್ನು ಪತಾಕೆಯನ್ನು ಹೆಚ್ಚಿಸು ಬೇಕೆಂದು ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು. ಆಡಳಿತ ಮಂಡಳಿ ಸದಸ್ಯರು. ಸೋನಿಯಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಕಾಶ್ ಜೋಗಿನ್. ಮತ್ತು ಉಪನ್ಯಾಸಕರುಗಳಾದ ಸಿಬ್ಬಂದಿಗಳಾದ ಗಂಗಾಧರ ಮರಳಿಹಳ್ಳಿ, ಮಲ್ಲಪ್ಪ ಬೈರಪ್ಪನವರ್, ವಿವೇಕ್ ಗರಾಜ್, ಸಂತೋಷ್, ಲಕ್ಷ್ಮಿ, ಆಕಾಶ್, ಕುರಿ, ಉಳಿದೆಲ್ಲ ಸಿಬ್ಬಂದಿಗಳು ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು 79ನೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸೋನಿಯಾ ಪದವಿ ಮಹಾವಿದ್ಯಾಲಯದ ಬಿಕಾಂ ವಿದ್ಯಾರ್ಥಿನಿಯರಾದ ಕುಮಾರಿ ಕಾವೇರಿ ಕಮತರ್. ಕುಮಾರಿ ಮಯೂರಿ ಸಾಂಗವಿ. ಮ್ಯಾನೇಜ್ಮೆಂಟ್ ವಿಷಯದಲ್ಲಿ ನೂರಕ್ಕೆ ನೂರು ಹೆಚ್ಚು ಅಂಕ ಪಡೆದ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಸೋನಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಗೌರವ ನೆನಪಿನ ಕಾಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.




