Top Newsಅಪರಾಧಜಿಲ್ಲೆ

ಸೇಂಟ್ ಆ್ಯಂಡ್ರೊಸ್ ಆಂಗ್ಲ‌ ಮಾಧ್ಯಮ ಶಾಲೆ ಮೇಲೆ ಹಿಡಿತ್ ಸಾಧಿಸಲು ಮುಂದಾದ್ರಾ ರಾಜು ಜೋಸೆಫ್.?

ಹುಬ್ಬಳ್ಳಿ: ಅದೂ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ, ಆ ಶಾಲೆಗೆ ಒಬ್ಬರು ಚೇರ್ಮನ್ ಹಾಗೂ ಆಡಳಿತ ಕಮಿಟಿ ಇತ್ತು. ಕಮಿಟಿಯ ಚೇರ್ಮನ್ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಇದೀಗ ಚೇರ್ಮನ್ ಶಾಲೆಗೆ ಬಂದಿಲ್ಲ, ಆದರೆ ಶಿಕ್ಷಕರು ಸೇರಿ ಶಾಲೆಯ ಎಲ್ಲವನ್ನೂ ಚೇರ್ಮನ್ ಆ್ಯಂಡ್ ಕಮಿಟಿ ಎಲ್ಲವನ್ನೂ ನೋಡಿಕೊಂಡು ಹೊಗುತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಏಕಾಏಕಿ ರಾಜು ಜೋಸೆಫ್ ಎನ್ನುವವರು ಶಾಲೆಗೆ ನುಗ್ಗಿ, ಶಾಲೆಯ ಕಮಿಟಿಯಲ್ಲಿನ ಸದಸ್ಯರೊಬ್ಬರಿಗೆ ಮಾನಸಿಕ ಹಿಂಸೆ ನೀಡಿದ್ದಲ್ಲದೇ ಅಲ್ಲಿಯ ಕೆಲವು ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ.

ಹೌದು, ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಕಾಲೋನಿಯಲ್ಲಿನ ಸೇಂಟ್ ಆ್ಯಂಡ್ರೂಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೇ ಇಂತಹ ಆರೋಪ ಕೇಳಿಬಂದಿದೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಲ್ಲಿನ ಶಿಕ್ಷಕರು, ಈಗಾಗಲೇ ನಮ್ಮ ಶಾಲೆಗೆ ಆಡಳಿತ ಮಂಡಳಿ ಇದೆ, ನಮ್ಮ ಶಾಲೆಗೆ ಚಂದ್ರಶೇಖರವರು ಚೇರಮನರಾಗಿದ್ದಾರೆ. ಚಂದ್ರಶೇಖರವರು ನಮಗೆ ಸರಿಯಾಗಿ ಸಂಬಳವನ್ನು ಪ್ರತಿ ತಿಂಗಳು ನೀಡುತ್ತಾ ಬಂದಿದ್ದಾರೆ. ಶಾಲೆಯನ್ನು ತುಂಬಾ ಸುಧಾರಿಸಲು ಕೂಡಾ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ಚೇರಮನ ಚಂದ್ರಶೇಖರ ಮೇಲೆ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ಅವರು ಈ ಕಡೆ ಬಂದಿಲ್ಲ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಹುಬ್ಬಳ್ಳಿಯ ರಾಜು ಜೋಸೆಫ್ ಅನ್ನುವವರು ತಮ್ಮದೊಂದು ಟೀಂ ಕಟ್ಟಿಕೊಂಡು ಶಾಲೆಗೆ ನುಗ್ಗಿ, ಶಾಲೆಯ ಆಫೀಸ ಕಚೇರಿಯಲ್ಲಿ ಒಬ್ಬೊಬ್ಬರನ್ನು ಕರೆದು ಮ್ಯಾನ ಹ್ಯಾಂಡಲ್ ಮಾಡಿದ್ದಾರೆ. ಅಲ್ಲದೇ ತಮ್ಮ ಮಾತನ್ನು ಕೇಳದ ಸಿಬ್ಬಂದಿಯನ್ನು ತೆಗೆದು ಹಾಕುವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಇನ್ನು ಈ ಶಾಲೆಯಲ್ಲಿ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ರಾಜು ಜೋಸೆಫ್ ಅವರು ಶಾಲೆಯ ಅಡಳಿತ ಕಮಿಟಿ ಇನ್ನೂ ಮುಂದೆ ನಾವೇ ಅಂತಿದ್ದಾರೆ. ನಾಗರ ಪಂಚಮಿ ಮುಗಿದ ಮೇಲೆ ಬಂದು ಶಾಲೆ ಪ್ರಿನ್ಸಿಪಲ್ ‌ರನ್ನು ಬದಲಾಯಿಸಿದ್ದಾರೆ‌. ಇದರ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಾದ ದ್ವರರಾಜ್ ಮಣಕುಂಟ್ಲಾ ಅವರಿಗೆ ಮಾಹಿತಿ ನೀಡಿದಾಗ ಅವರು ಬಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರು ಎಂದು ವಿವರಿಸಿದರು.

ಇನ್ನು ರಾಜು‌ ಜೋಸೆಫ್ ಇವರು ಮೂರು ಜನ ಪುರುಷ ಹಾಗೂ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಶಾಲೆ ನುಗ್ಗಿ, ನಮ್ಮಗೆ ಮಾನಸಿಕ ಜತೆಗೆ ಕೆಲವು ಶಿಕ್ಷಕರಿಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಕಾನೂನು ಬದ್ಧವಾಗಿ ಅವರು ಬಾರದೇ, ಕಾನೂನು ಬಾಹಿರವಾಗಿ ಬಂದು ಶಾಲಾ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡೋದು ಎಷ್ಟು ಸರಿ? ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಶಿಕ್ಷಕರು ಆಗ್ರಹಿಸಿದ್ದಾರೆ.‌

ಈ ಕುರಿತು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತರುವುದಾಗಿ ಶಿಕ್ಷಕಿಯರಾದ ಸೌಮ್ಯಾ, ಅನುಶಾ ತಿಳಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
1
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button