ಜಿಲ್ಲೆ

ಹುಬ್ಬಳ್ಳಿ ಶಹರ ತಹಶೀಲ್ದಾರರಾಗಿ ಮಹೇಶ ಗಸ್ತೆ ಅಧಿಕಾರ ಸ್ವೀಕಾರ

ಕಿತ್ತೂರಿಗೆ ಕಲಗೌಡ ಪಾಟೀಲ ವರ್ಗಾವಣೆ

ಹುಬ್ಬಳ್ಳಿ: ಹುಬ್ಬಳ್ಳಿ ಶಹರ ತಹಶೀಲ್ದಾರರಾಗಿ ಮಹೇಶ ಭಗವಂತ ಗಸ್ತೆ ಅವರು ಇತ್ತಿಚೆಗೆ ಅಧಿಕಾರ ಸ್ವೀಕರಿಸಿದರು.

ಕಲಗೌಡ ಪಾಟೀಲ ಅವರು ಅಧಿಕಾರ ಹಸ್ತಾಂತರ ಮಾಡಿದರು. ಈ ಹಿಂದೆ ತಹಶೀಲ್ದಾರರಾಗಿದ್ದ ಕಲಗೌಡ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿಗೆ ವರ್ಗಾವಣೆಯಾದರು.

ಮಹೇಶ ಭಗವಂತ ಗಸ್ತೆ ಅವರು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ವಿಶೇಷ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಹುಬ್ಬಳ್ಳಿ ಶಹರ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button