ಜಿಲ್ಲೆ

ಹುಬ್ಬಳ್ಳಿಯಲ್ಲಿ ಕನ್ನಡಧ್ವಜಕ್ಕೆ ಅಪಮಾನ?

ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಕನ್ನಡ ಧ್ವಜವನ್ನು ಏಕಾಏಕಿ ತೆಗೆದು ಹಾಕಿ ಕನ್ನಡಧ್ವಜಕ್ಕೆ ಕೆಎಸ್ ಆರ್ ಟಿಸಿ ಅಧಿಕಾರಿಗಳು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘ ಬಸ್ ನಿಲ್ದಾಣದ ಮುಂಭಾಗದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿತು.

ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಳೆದ ಹಲವಾರು ವರ್ಷಗಳಿಂದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಕನ್ನಡ ಧ್ವಜವನ್ನು ಹಾಕಲಾಗಿತ್ತು, ಆದರೆ ಬಸ್ ನಿಲ್ದಾಣ ತೆರವುಗೊಳಿಸಿ ಹೊಸ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡ ಕಾರಣಕ್ಕೆ ಧ್ವಜವನ್ನು ತೆಗೆಯಲಾಗಿತ್ತು.

ಇದೀಗ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಬಸ್ ನಿಲ್ದಾಣ ಸ್ಥಾಪಿಸಿ ಉದ್ಘಾಟನೆ ಮಾಡಲಾಗಿದೆ. ಇದೀಗ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ಕನ್ನಡಧ್ವಜವನ್ನು ಹಾಕಲಾಗಿತ್ತು. ಆದರೆ NWKSRTC ಅಧಿಕಾರಿಗಳು ಕನ್ನಡಧ್ವಜದ ಅಸ್ಮಿಯತೆಗೆ ಬೆಲೆ ಕೊಡದೇ ಏಕಾಏಕಿ ಯಾರಿಗೂ ತಿಳಿಸದೇ ಕನ್ನಡಧ್ವಜವನ್ನು ತೆರೆವುಗೊಳಿಸಿ ರಾಜ್ಯಧ್ವಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.

ಈ ವೇಳೆ ಸ್ಥಳಕ್ಕೆ ಪೊಲೀಸರು ಧಾವಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕಾರ ಮಾಡಿದರು. ಆದರೆ ಪ್ರತಿಭಟನಾಕಾರರು ಮಾತ್ರ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಬೇಕು. ಕೂಡಲೇ ಪುನಃ ಕನ್ನಡಧ್ವಜವನ್ನು ಹಾಕಬೇಕೆಂದು ಆಗ್ರಹಿಸಿದರು.

 NWKSRTC ಅಧಿಕಾರಿಗಳು ಕನ್ನಡಧ್ವಜವನ್ನು ತೆರವುಗೊಳಿಸುತ್ತಿರುವ ದೃಶ್ಯ

ಆ ಬಳಿಕ NWKSRTC ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಿ, ಮೂರು ದಿನಗಳ ಒಳಗಾಗಿ ಕನ್ನಡ ಧ್ವಜವನ್ನು ಹಾಕುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಅದಾಗ್ಯೂ ಕೂಡಾ ಆಟೋ ಚಾಲಕರು ಒಂದು ವೇಳೆ ಮಾತಿಗೆ ತಪ್ಪಿದರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button