Notice: Function _load_textdomain_just_in_time was called incorrectly. Translation loading for the disable-gutenberg domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/dinavanissh/webapps/dinavani/wp-includes/functions.php on line 6121

Notice: Function _load_textdomain_just_in_time was called incorrectly. Translation loading for the font-size-change domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/dinavanissh/webapps/dinavani/wp-includes/functions.php on line 6121

Notice: Function _load_textdomain_just_in_time was called incorrectly. Translation loading for the super-progressive-web-apps domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/dinavanissh/webapps/dinavani/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wpreactions-lite domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/dinavanissh/webapps/dinavani/wp-includes/functions.php on line 6121
ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ – Dinavani
ಆರೋಗ್ಯಜಿಲ್ಲೆ

ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ

ಧಾರವಾಡ: ಉತ್ತರ ಕರ್ನಾಟಕದ ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾದ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರವೂ ಕಳೆದ ವರ್ಷ ವ್ಯಾಸ್ಕ್ಯೂಲರ್ ಚಿಕಿತ್ಸಾ ವಿಭಾಗ ಪ್ರಾರಂಭಿಸಿತ್ತು, ಇದು ಆರಂಭವಾದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ 250ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆಗಳನ್ನು ನಡೆಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಉತ್ತರ ಕರ್ನಾಟಕದಲ್ಲಿ ವ್ಯಾಸ್ಕ್ಯೂಲರ್ ಚಿಕಿತ್ಸಕರು ವಿರಳ, ಬೆರಳಣಿಕೆಯಷ್ಟು ತಜ್ಞ ವೈದ್ಯರು ಮಾತ್ರ ಇಲ್ಲಿ ಲಭ್ಯ ಇಂತಹ ಸಂಧರ್ಭದಲ್ಲಿ ನಾರಾಯಣ ಹಾರ್ಟ್ ಸೆಂಟರ್ ಇದಕ್ಕಾಗಿಯೇ ಒಂದು ವಿಶೇಷ ವಿಭಾಗ ಆರಂಭಿಸಿ, ವ್ಯಾಸ್ಕ್ಯೂಲರ್ ಅಥವಾ ರಕ್ತನಾಳೀಯ ರೋಗಗಳಿಗೆ ಸಂಬಂಧಿಸಿದಂತೆ ಇಲ್ಲಿಯ ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸುವಂತೆ ಮಾಡಿದೆ. ಈ ವಿಭಾಗವು ಸುಮಾರು 250ಕ್ಕೂ ಅಧಿಕ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ಒದಗಿಸಿ ಸಾಧನೆ ಮಾಡಿದೆ. ವ್ಯಾಸ್ಕ್ಯೂಲರ್ ಚಿಕಿತ್ಸಕರ ಕೊರತೆಯಿರುವ ಈ ಪ್ರದೇಶದಲ್ಲಿ, ಆಸ್ಪತ್ರೆಯು ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ನೀಡುವ ತನ್ನ ಬದ್ದತೆಯನ್ನು ಈ ಸಾಧನೆ ಮೂಲಕ ಎತ್ತಿ ಹಿಡಿದಿದೆ.

ವ್ಯಾಸ್ಕೂಲರ್ ಮತ್ತು ಎಂಡೋವ್ಯಾಸ್ಕ್ಯೂಲರ್ ತಜ್ಞ ಡಾ. ಬಸವರಾಜೇಂದ್ರ ಆನೂರ್ ಶೆಟ್ರು ಅವರ ನೇತೃತ್ವದಲ್ಲಿ ಈ ವಿಭಾಗವು ತೆರೆದ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾಥ್ ಲ್ಯಾಬ್ ನಲ್ಲಿನ ಎಂಡೋವ್ಯಾಸ್ಕ್ಯೂಲರ್ ಚಿಕಿತ್ಸೆಗಳೆರಡರಲ್ಲೂ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡುತ್ತಿದೆ. ಇದರಿಂದಾಗಿ ರೋಗಿಗಳು ದೂರದ ಊರುಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದೆ ಸುಧಾರಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಿದೆ. ” ನಮ್ಮ ಗುರಿ ರೋಗಿಗಳಿಗೆ ತಮ್ಮ ಊರಿನಲ್ಲೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡುವುದು,” ಎಂದು ಡಾ. ಬಸವರಾಜೇಂದ್ರ ಅವರು ಹೇಳಿದರು.

ಅತ್ಯಾಧುನಿಕ ಲೇಸರ್ ಅಬ್ಲೇಶನ್ ನೊಂದಿಗೆ ವ್ಯಾಸ್ಕ್ಯೂಲರ್ ಆರೈಕೆ

ಆಸ್ಪತ್ರೆಯ ಮುಕುಟಕ್ಕೆ ಇನ್ನೊಂದು ಗರಿ ಎನ್ನುವಂತೆ ವ್ಯಾಸ್ಕ್ಯೂಲರ್ ಚಿಕಿತ್ಸೆಗಾಗಿ ಅತ್ಯಾಧುನಿಕ ಎಂಡೋವೆನಸ್ ಲೇಸರ್ ಥೇರಪಿ (EVLT) ಯನ್ನು ಪರಿಚಯಿಸಿದೆ. ಇದು ವ್ಯಾಸ್ಕ್ಯೂಲರ್ ಆರೈಕೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. EVLT ಸಾಂಪ್ರದಾಯಿಕ ರಕ್ತನಾಳದ ಶಸ್ತ್ರಚಿಕಿತ್ಸೆಗಿಂತ ಕನಿಷ್ಠಗಾಯದ ಚಿಕಿತ್ಸೆ (ಮಿನಿಮಲ್ ಇನ್ವೇಸಿವ್) ಆಯ್ಕೆಯಾಗಿದೆ. ಇದರ ವೈಶಿಷ್ಟ್ಯವೆನೆಂದರೆ ರೋಗಿಯೂ ಶೀಘ್ರ ಚೇತರಿಕೆ ಆಗುವದಲ್ಲದೆ, ಕಡಿಮೆ ನೋವು ಮತ್ತು ಉತ್ತಮ ರಕ್ತ ಪರಿಚಲನೆಯನ್ನು ಈ ಚಿಕಿತ್ಸೆ ನೀಡುತ್ತದೆ. ವಿಶೇಷವೆನೆಂದರೆ ಈ ವಿಭಾಗವು ಪ್ರಾರಂಭವಾದ ಒಂದು ವರ್ಷದ ಅವಧಿಯಲ್ಲಿ ೧೦೦ ಕ್ಕೂ ಹೆಚ್ಚು ಲೇಸರ್ ಥೇರಪಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

“ನಮ್ಮ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ತಂತ್ರಜ್ಞಾನವು ರೋಗಿಗಳಿಗೆ ಆರಾಮದೊಂದಿಗೆ ನಿಖರವಾದ ಚಿಕಿತ್ಸೆಯನ್ನು ನೀಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ,” ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಶಿಕುಮಾರ ಪಟ್ಟಣಶೆಟ್ಟಿಯವರು ಹೇಳಿದರು.

ಎಂಡೋವ್ಯಾಸ್ಕ್ಯಲರ್ ತಂತ್ರಗಳೊಂದಿಗೆ ಫೆರಿಫೆರಲ್ ವ್ಯಾಸ್ಕ್ಯುಲರ್ ರೋಗ ಆರೈಕೆ

ಈ ಕೇಂದ್ರವು ಫೆರಿಫೆರಲ್ ವ್ಯಾಸ್ಕ್ಯೂಲರ ರೋಗದಿಂದ ( Peripheral Vascular Disease (PVD) ಯಿಂದ ಬಳಲುತ್ತಿರುವ ರೋಗಿಗಳಿಗೆ ಸುಧಾರಿತ ಎಂಡೋವ್ಯಾಸ್ಕ್ಯಲರ್ ಅಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್ಅನ್ನು ಸಹ ನೀಡುತ್ತಿದೆ. ಇಲ್ಲಿಯವರೆಗೆ ೮೦ಕ್ಕೂ ಹೆಚ್ಚು ಯಶಸ್ವಿ ಎಂಡೋವ್ಯಾಸ್ಕ್ಯಲರ್ ಚಿಕಿತ್ಸೆಗಳನ್ನು ನಡೆಸಲಾಗಿದೆ, ಎಂದು ಡಾ. ಆನೂರ್ ಶೆಟ್ರು ತಿಳಿಸಿದರು.

ಈ ಕಾಯಿಲೆಯು ಹೃದಯ ಮತ್ತು ಮೆದುಳಿನ ಹೊರಗಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ, ಸಾಮಾನ್ಯವಾಗಿ ಕಾಲುಗಳು ಮತ್ತು ಪಾದಗಳಲ್ಲಿ ಇದು ನೋವು, ಮರಗಟ್ಟುವಿಕೆ ಮತ್ತು ತೀವ್ರ ತರವಾದ ಪ್ರಕರಣಗಳಲ್ಲಿ ಪಾದದ ಗ್ಯಾಂಗ್ರೀನ್ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಎಂಡೋವ್ಯಾಸ್ಕ್ಯಲರ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಟಿಂಗ್ ಕನಿಷ್ಠ ಗಾಯದ ಚಿಕಿತ್ಸಾ ವಿಧಾನಗಳಾಗಿದ್ದು, ಇದು ಪೀಡಿತ ಅಂಗಗಳಿಗೆ ರಕ್ತದ ಹರಿವನ್ನು ಪರಿಣಾಮಕಾರಿಯಾಗಿ ಪುನಃ ಸ್ಥಾಪಿಸುತ್ತದೆ, ಇದರಿಂದಾಗಿ ರೋಗಿಗಳ ಜೀವನದ ಗುಣಮಟ್ಟವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದರು.

ಎಂಡೋವ್ಯಾಸ್ಕ್ಯಲರ್ ಸ್ಟೆಟಿಂಗ್: ಆಂಜಿಯೋಪ್ಲ್ಯಾಸ್ಟಿ ನಂತರ, ಅಪಧಮನಿಯನ್ನು ತೆರೆದಿಡಲು ಮತ್ತು ಭವಿಷ್ಯದಲ್ಲಿ ಮತ್ತೆ ಕಿರಿದಾಗುವುದನ್ನು ತಡೆಯಲು ಸ್ಟಂಟ್ ನ್ನು ಅಪಧಮನಿಯಲ್ಲಿ ಇರಿಸಲಾಗುತ್ತದೆ.

ಅತಿ ಶೀಘ್ರದಲ್ಲಿ ಮಧುಮೇಹ ಪಾದ ಚಿಕಿತ್ಸಾಲಯ ಆರಂಭ

ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ತನ್ನ ಹೊಸ ಮಧುಮೇಹ ಪಾದ ಚಿಕಿತ್ಸಾಲಯವನ್ನು ಪ್ರಾರಂಭಿಸುತ್ತಿದೆ. ಇದು ಮಧುಮೇಹ ದಿಂದ ಪಾದಗಳಲ್ಲಿ ಉಂಟಾಗುವ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾದ ಸೌಲಭ್ಯವಾಗಿದೆ ಎಂದು ಡಾ. ಆನೂರ್ ಶೆಟ್ರು ತಿಳಿಸಿದರು.

ಈ ಚಿಕಿತ್ಸಾಲಯವು ಅತಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು. ಜಾಗತಿಕವಾಗಿ ಮಧುಮೇಹ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಪಾದದ ಸಮಸ್ಯೆಗಳು ಮಧುಮೇಹಿ ರೋಗಿಗಳಿಗೆ ಅತ್ಯಂತ ಗಂಭೀರವಾದ ಮತ್ತು ತಡಗಟ್ಟುಬಹುದಾದ ಸಮಸ್ಯೆಗಳಲ್ಲಿ ಒಂದಾಗಿದೆ. ಹೊಸ ಚಿಕಿತ್ಸಾಲಯವು ಸುಧಾರಿತ ರೋಗ ನಿರ್ಣಯ ಸಾಧನಗಳು, ಅತ್ಯಂತ ಶಿಸ್ತಿನ ಆರೈಕೆ ತಂಡಗಳು ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ಪ್ರೋಟೋಕಾಲ್ ಗಳನ್ನು ಹೊಂದಿದ್ದು, ಮಧುಮೇಹ ಪಾದದ ಹುಣ್ಣುಗಳು, ಸೊಂಕುಗಳು ಮತ್ತು ಬಾಹ್ಯ ನರರೋಗ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳ ಸಮಗ್ರ ನಿರ್ವಹಣೆಯನ್ನು ಖಚಿತ ಪಡಿಸುತ್ತದೆ ಎಂದರು.

“ಗ್ಯಾಂಗ್ರಿನ್ ನಿಂದಾಗಿ ಕಾಲು ಕತ್ತರಿಸುವಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಲು ಮತ್ತು ವಿಶೇಷ ಆರೈಕೆಯನ್ನು ಒದಗಿಸಲು ಈ ನಮ್ಮ ಹೊಸ ಸೇವೆಯ ಗುರಿಯಾಗಿದೆ,” ಎಂದು ಡಾ. ಬಸವರಾಜೇಂದ್ರ ಹೇಳಿದರು.

ಮಧುಮೇಹ ಪಾದ ಚಿಕಿತ್ಸಾಲಯವು ಈ ಕೆಳಗಿನ ಸೇವೆಗಳನ್ನು ನೀಡಲಿದೆ

• ನಿಯಮಿತ ಪಾದ ತಪಾಸಣೆ
• ಗಾಯದ ಆರೈಕೆ ಮತ್ತು ಹುಣ್ಣು ನಿರ್ವಹಣೆ
• ವ್ಯಾಸ್ಕ್ಯೂಲರ್ ಮೌಲ್ಯಮಾಪನ
• ಪಾದದ ಆರೈಕೆ ಮತ್ತು ಮಧುಮೇಹ ನಿರ್ವಹಣೆಯ ಕುರಿತು ಶಿಕ್ಷಣ
• ಕಸ್ಟಮ್ ಆರ್ಥೋಟಿಕ್ಸ್ ಮತ್ತು ಪಾದರಕ್ಷೆಗಳ ಶಿಫಾರಸ್ಸುಗಳು
• ಬಹು-ಶಿಸ್ತಿನ ವಿಧಾನದೊಂದಿಗೆ, ಈ ಚಿಕಿತ್ಸಾಲಯವು ಗಾಯದ ಆರೈಕೆ, ಸೋಂಕು ನಿಯಂತ್ರಣ ಮತ್ತು ವ್ಯಾಸ್ಕ್ಯೂಲರ್ ಮೌಲ್ಯಮಾಪನ ನೀಡುತ್ತದೆ, ಇದರಿಂದ ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ಖಚಿತ ಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ ಪಟ್ಟಣಶೆಟ್ಟಿ, ಸೀನಿಯರ್ ಮಾರ್ಕೇಟಿಂಗ್ ಮ್ಯಾನೇಜರ್ ಅಜೇಯ ಹುಲಮನಿ, ಡೆಪ್ಯೂಟಿ ಮ್ಯಾನೇಜರ್  ದುಂಡೇಶ ತಡಕೋಡ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button