ಹಣ ಗಳಿಸಲು ದುಡಿಮೆ ಮಾಡಬೇಡಿ ವಿದ್ಯಾರ್ಥಿಗಳಿಗೆ ಎನ್.ಶಶಿಕುಮಾರ ಕಿವಿಮಾತು

ಹುಬ್ಬಳ್ಳಿ: ಯುನಿವರ್ಸಲ್ ಎಜುಕೇಶನ್ ಅಸೋಸಿಯೇಷನ್ ಹಾದಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಾಲೆಯ ಗ್ಯಾದರಿಂಗ್ ಫತೇಶಾ ಹಾಲ್ ಮಾವನೂರ್ ರೋಡ್ ಹಳೆ ಹುಬ್ಬಳ್ಳಿಯಲ್ಲಿ ನೇರವೇರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಕೆಪಿಸಿಸಿ ಕೋಆರ್ಡಿನೇಟರ್ ರಾಜು ಹೆಚ್.ಎಂ. ಹಾಗೂ ಡಿಸಿಸಿ ಅಲ್ತಾಫ್ ಹುಸೇನ್ ಕಲ್ಲೂರ್, ವೀರಣ್ಣ ಹಿರೇಮಠ್, ನೂಲ್ವಿ ಉರ್ದು ಸ್ಕಾಲರ್ ಮತ್ತು ಹಿಂದುಸ್ತಾನಿ ಪ್ರಸಿದ್ಧ ಡಾಕ್ಟರ್ ಯಾಸೀನ್ ರಾಹೀ ಸಲೆಬ ಹಾಗೂ ಕಮಿಟಿ ಮೆಂಬರ್ಸ್ ಟೀಚರ್ಸ್ ಹಾಗೂ ಹಾದಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಕ್ಕಳು ಪೋಷಕರು ಎಲ್ಲರೂ ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಇದರ ನಂತರ ಐ ಅಲ್ ಮದರಸತುಲ್ ಹಾದಿ ಅತುಲ್ ಬನಾಥ್ ಕಾರ್ಯಕ್ರಮವು ಕೂಡ ಯಶಸ್ವಿಗೊಂಡಿತು.
ಈ ವೇಳೆ ಮಾತನಾಡಿದ ಎನ್.ಶಶಿಕುಮಾರ್, ಮಕ್ಕಳು ವಿದ್ಯೆಯ ಜೊತೆಗೆ ವ್ಯಕ್ತಿತ್ವ ವಿಕಸನ ಪಡಿಸಿಕೊಳ್ಳಬೇಕು. ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದರು.
ಶಾಲೆ ಶಿಕ್ಷಕರು ಮಾತ್ರ ಮಕ್ಕಳ ಶಿಕ್ಷಣಕ್ಕೆ ಜವಾಬ್ದಾರರಲ್ಲ. ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಹ ಪ್ರೋತ್ಸಾಹ ನೀಡಬೇಕು. ಅತ್ಯಂತ ಪ್ರೀತಿಯಿಂದ ಮಮತೆಯಿಂದ ಮಕ್ಕಳನ್ನು ಪೋಷಣೆ ಮಾಡಬೇಕು ಎಂದರು.
“ಮಕ್ಕಳಿಗೆ ನೀವು ಏನಾದರೂ” ಆಗಿ ಆದರೆ ಈ ಭೂಮಿಯ ಋಣವನ್ನು ಮಾತ್ರ ಮರೆಯಬೇಡಿ. ವೈದ್ಯರಾಗಿ, ಶಿಕ್ಷಕರಾಗಿ ಇದೆ ಊರಿನಲ್ಲಿ ಅಂದರೆ “ಗಂಡು ಮೆಟ್ಟಿದ” ನಾಡು ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿ. ಹಣಗೋಸ್ಕರ ದುಡಿಯಬೇಡಿ, ಮಕ್ಕಳಿಗೋಸ್ಕರ ರೋಗಿಗಳಿಗೋಸ್ಕರ ಇಲ್ಲಿನ ಪ್ರಜೆಗಳಿಗೋಸ್ಕರ ನಿಮ್ಮ ಸೇವೆಯನ್ನು ಸಲ್ಲಿಸಿ ಎಂದರು.
ಇದೇ ಸಂದರ್ಭದಲ್ಲಿ ಹಾದಿ ಇಂಗ್ಲಿಷ್ ಮೀಡಿಯಂ ಸ್ಕೂಲಿನ ವತಿಯಿಂದ ಹೃತ್ಪೂರ್ವಕ ವಂದನೆಗಳನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಯಿತು.




