
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾಗಿ ಫೈಜಾಹ್ಮದ ನೂರಅಹ್ಮದ ಕಲಘಟಗಿ ಅವರನ್ನು ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಹೌದು, ಹುಬ್ಬಳ್ಳಿಯ ಗೌಸಿಯಾಟೌನ್ ನಿವಾಸಿಯಾಗಿರುವ ಫೈಜಾಹ್ಮದ ನೂರಅಹ್ಮದ ಕಲಘಟಗಿ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಸರ್ಕಾರ ಇದೀಗ ಫೈಜಾಹ್ಮದ ಕಲಘಟಗಿ ಅವರನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕ ಮಾಡಿದ್ದು, ಇಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ, ಆಯುಕ್ತರಾದ ಸಂತೋಷ ಬಿರಾದಾರ ಅವರು ನೇಮಕಾತಿ ಆದೇಶ ಪತ್ರವನ್ನು ನೀಡಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ ಕುಂದನಹಳ್ಳಿ, ದಾದಾ ಹೈಯಾತ್ ಕೈರಾತಿ, ಆರೀಫ್ ದೊಡ್ಡಮನಿ, ಸೈಯದ್ ಸಲೀಂ ಮುಲ್ಲಾ, ನಾಶೀರ ಅಸುಂಡಿ, ಮುಸ್ತಾಕ್ ಅತ್ತಾರ, ಮುನಾಫ್ ದೇವಗೇರಿ, ಸಲೀಂ ಸುಂಡಕೆ, ಅಬ್ಬಾಸ್ ಕುಮಟಾಕರ್ ಸೇರಿದಂತೆ ಮುಂತಾದವರು ಇದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




