
ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ 405 ಅಡಿ ಎತ್ತರದ ಸಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣಕ ಪ್ರತಿಷ್ಠಾ ಮಹಾಮಹತ್ಸೋವ ಹಾಗೂ 61 ಫುಟ್ ಎತ್ತರದ ಭಗವಾನ್ ಶ್ರೀ ಪಾಶ್ವನಾಥರ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಕಿಸೆಕಳ್ಳರ ಕಾಟ ಹೆಚ್ಚಾಗಿದೆ.
ಹೌದು, ಕಳೆದ ಜ.15 ರಿಂದ ನಡೆಯುತ್ತಿರುವ ಈ ಅದ್ದೂರಿ ಕಾರ್ಯಕ್ರಮವು ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ತಿಳಿಸಿದಂತೆ ವಿಶಿಷ್ಟ, ಅದ್ಬುತ, ನಂಬಲಾಗದ, ಕಾರ್ಯಕ್ರಮಗಳ ಸುರಿಮಳೆಯೇ ಆಗುತ್ತಿದೆ.
ಪ್ರತಿನಿತ್ಯ ಪಂಚಕಲ್ಯಾಣಕ ಪ್ರತಿಷ್ಠಾ ಮಹಾಮಹೋತ್ಸವವನ್ನು ನೋಡಲು ಧಾರವಾಡ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯ, ಹೊರ ರಾಷ್ಟ್ರದಿಂದ ಜನರು ಬರುತ್ತಿದ್ದಾರೆ. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕದ್ದೀಮರು ಬರುವ ಭಕ್ತರ ಕಿಸೆಗಳಿಗೆ ಕತ್ತರಿ ಹಾಕುತ್ತಿದ್ದಾರೆ.
ಅಷ್ಟೇ ಅಲ್ಲದೇ ಭಕ್ತರ ಮೊಬೈಲ್’ಗಳನ್ನು ಬಿಡುತ್ತಿಲ್ಲವಂತೆ ಹೀಗಾಗಿ ಜನರು ಕಳ್ಳರ ಕೈಚಳಕಕ್ಕೆ ಭಯಬೀತರಾಗಿದ್ದಾರೆ.
ಹೀಗೆ ಭಕ್ತರೊಬ್ಬರ ಜೇಬಿಗೆ ಕೈ ಹಾಕಿದ್ದ ಕದೀಮನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಇಂದು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧಿತನನ್ನು ಹುಬ್ಬಳ್ಳಿಯ ವೀರಾಪುರ ಓಣಿಯ ಗಣೇಶ ಎಂದು ಗುರುತಿಸಲಾಗಿದ್ದು, ಮಹಾಮಸ್ತಕಾಭಿಷೇಕದಲ್ಲಿ ಇನ್ನೆಷ್ಟು ಕಳ್ಳತನ ಮಾಡಿದ್ದಾನೆಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಹೀಗಾಗಿ ವರೂರ ಗ್ರಾಮದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜೇಬುಕಳ್ಳರ ಬಗ್ಗೆ ಗಮನ ಇರಬೇಕು. ಇಲ್ಲವಾದಲ್ಲಿ ನಿಮ್ಮ ವಸ್ತುಗಳಿಗೆ ಕನ್ನ ಬಿಳೋದು ಗ್ಯಾರಂಟಿ.




