
ಹುಬ್ಬಳ್ಳಿ: ಕಸ ಸಾಗಿಸುತ್ತಿದ್ದ ಪಾಲಿಕೆ ಟ್ರ್ಯಾಕ್ಟರ್ ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಕಿಮ್ಸ್ ಹಿಂದಿನ ಗೇಟ್ ಬಳಿಯಲ್ಲಿ ನಡೆದಿದೆ.
ಸ್ಕೂಟಿ ಚಲಾಯಿಸುತ್ತಿದ್ದ ಅದ್ವೈತ ಬಾಗಲಕೋಟ (19) ಎಂಬ ಯುವಕನೇ ಸಾವನ್ನಪ್ಪಿದ್ದಾನೆ. ಸ್ಕೂಟಿ ಹಿಂಬದಿ ಕುಳಿತಿದ್ದ ವಿವೇಕ್ ಗುಡಿ (19) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಯುವಕನ ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1