
ಹುಬ್ಬಳ್ಳಿ: ಎಸ್ಐಡಬ್ಲೂಎಎ ರಾಷ್ಟ್ರಮಟ್ಟದ ಸಂಸ್ಥೆಯು ದಕ್ಷಿಣ ಭಾರತೀಯ ಮಹಿಳಾ ಸಾಧಕಿ ಎಂದು ಹುಬ್ಬಳ್ಳಿ ಮೂಲದ ಮಹಿಳಾ ನವ ಉದ್ಯಮಿ ರೂಪತಾರಾ ಶಿವಾಜಿ ಸಾಂಗ್ಲಿಕರ್ ಅವರಿಗೆ ಆಯ್ಕೆ ಮಾಡಿ ವಿಶೇಷ ಪ್ರಶಸ್ತಿ ನೀಡಿದೆ.

ಪರಿಶ್ರಮಪಟ್ಟಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ರೂಪತಾರಾ ಅವರು ಪ್ರೇರಣೆಯಾಗಿದ್ದಾರೆ. ಅವರಿಗೆ ದಕ್ಷಿಣ ಭಾರತದಲ್ಲಿ “ಔಟ್ ಸ್ಟ್ಯಾಂಡಿಂಗ್ ಎಂಟರ್ ಪ್ರೈನರ್” ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಿದೆ.
ಸದ್ಯ ನೂತನವಾದ ಸಾರಿಗೆ ಸೇವೆಯನ್ನು ಆರಂಭಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ರೂಪತಾರಾ ಅವರು, ಸೌಂದರ್ಯ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ರೂಪತಾರಾ ಒಬ್ಬರು ಹೆಲ್ತ್ ಕೇರ್’ನಲ್ಲಿ ಸಿಬ್ಬಂದಿಯಾಗಿದ್ದು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಯಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ತಮ್ಮದೇ ಸ್ವಂತ ಉದ್ಯಮ ಆರಂಭಿಸಿ ಮಹಿಳೆಯರು ಸ್ವಾವಲಂಬಿಗಳಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೂ ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ – 2024 (SIWAA) ಸಮಾರಂಭವನ್ನು TWELL ಮ್ಯಾಗಜೀನ್ ಆಯೋಜಿಸಿದ್ದು, ಇದು ಮಹಿಳಾ ಸಬಲೀಕರಣ ಕಾರ್ಯಕ್ರಮವಾಗಿದೆ. 2019 ರಿಂದ ಆರಂಭಗೊಂಡು ತನ್ನ 6 ನೇ ಆವೃತ್ತಿಯನ್ನು ನಡೆಸಿತು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರದ ವಿವಿಧ ಭಾಗದ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಹೀಗಾಗಿ ಈ ಕಾರ್ಯಕ್ರಮ ಹಿಂದೂಸ್ಥಾನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆಯಿತು.
ಈ ಸಂದರ್ಭದಲ್ಲಿ ಮ್ಯಾಗಜೀನ್ ಸಂಸ್ಥಾಪಕರಾದ ದೀಪಕ್ ಟಾಟರ್ ಜೈನ್, ನಿರ್ದೇಶಕಿ ಸಿಂಧು ಮಂಗಳವೇದ, ಇಂಟರ್ನ್ಯಾಷನಲ್ ವುಮನ್ ರೈಟ್ಸ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷರಾದ ರಾಧಾ ಕೊಲ್ಲಿ, ರೇವತಿ ಕಾಮತ್, ಡಾ.ಶುಭಮಂಗಳ ಸುನಿಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.




