
ಹುಬ್ಬಳ್ಳಿ: ನಗರದ ಹೊರವಲಯದ ಮನೆಗಳನ್ನೇ ಗುರಿಯಾಗಿಸಿಕೊಂಡು ಡಕಾಯಿತಿ ಮಾಡುತ್ತಿದ್ದ ಖತರ್ನಾಕ ಗ್ಯಾಂಗ್ ಇದೀಗ ಧಾರವಾಡದ ನವಲೂರಿನಲ್ಲಿ ವಿಕಾಸ ಕುಮಾರ ಎಂಬಾತರ ಮನೆಗೆ ನುಗ್ಗಿದೆ.
ಈ ವೇಳೆ ಮನೆಯಲ್ಲಿದ್ದ ದಂಪತಿಗಳ ಕೈಕಾಲು ಕಟ್ಟಿ, ಬಡಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇದೀಗ ಚಡ್ಡಿ ಗ್ಯಾಂಗ್’ನ ಕರಾಳತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೊಂದು ಮಟ್ಟಿಗೆ ನಟೋರಿಯಸ್ ದರೋಡೆಕೋರರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಚಡ್ಡಿ ಗ್ಯಾಂಗ್ ಕರಾಳತೆ 👆
ಈ ಮೇಲೆ ವಿಡಿಯೋ ನೋಡಿದ ಮೇಲೆ ಡಕಾಯಿತಿ ಗ್ಯಾಂಗ್ ಎಷ್ಟು ನಟೋರಿಯಸ್ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಧಾರವಾಡ ವಿದ್ಯಾಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಕಾಲಿಗೆ ಗುಂಡೆಟ್ಟು ನೀಡಿ ಬಂಧಿಸಿದ್ದಾರೆ. ಈ ಕಾಲಕ್ಕೆ ಪೊಲೀಸರ ಮೇಲೆಯೂ ಹಲ್ಲೆಯಾಗಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇನ್ನೂಳಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ.




