ಕುಂದಗೋಳ: ನಮಸ್ಕಾರ ರೀ ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿಕೆ ಮೇಡಂ….
ಏನ್ರೀ ! ಧಾರವಾಡ ಜಿಲ್ಲಾ ತಾಲೂಕ ಪಂಚಾಯತ ಒಳಗ್ ನಿಮ್ಮ ಆದೇಶ, ಜಿಲ್ಲಾ ಪಂಚಾಯತ್ ಆದೇಶ ಇರ್ಲಿ ಬಿಡ್ಲಿ ಕೆಲವೊಂದು ಆಫೀಸರ್ ತಾಲೂಕು ಪಂಚಾಯಿತಿ ಒಳಗ್ ತಮ್ಮದ್ ಕಾರಬಾರ್ ನಡೆಸಿ ಬಿಟ್ಟಾರ್..
ಹೌದು ರೀ ! ಇದಕ್ಕೆ ಬಾರಿ ಉದಾಹರಣೆ ಅಂದ್ರೆ ಮಾತೃ ಖಜಾನೆ ಇಲಾಖೆ ಹೊಂದಿದ್ದರೂ ಕುಂದಗೋಳ ತಾಲೂಕು ಪಂಚಾಯಿತಿಯಲ್ಲಿ ಕೆಲ್ಸಾ ಮಾಡೋ ಇಲಾಖೆಯಿಂದ ಪ್ರಥಮ ದರ್ಜೆ ಲೆಕ್ಕ ಸಹಾಯಕ ಕೆ.ಎನ್.ಮುಲ್ಲಾ ಕಳೆದ ನಾಲ್ಕು ವರ್ಷಗಳಿಂದ ಸಹಾಯಕ ಲೆಕ್ಕಾಧಿಕಾರಿ ಕಾರ್ಯವನ್ನು ಯಾವುದೇ ಆದೇಶ ಅಂದ್ರೇ ನಿಯಮ ಇಲ್ಲದಂಗ್ ನಡೆಸಿಕೋತ್ ಹೊಂಟಾರ್.
ಈ ಬಗ್ಗೆ ಮಾಹಿತಿ ಹಕ್ಕು ಒಳಗೆ ಆದೇಶ ಪ್ರತಿ ಕೇಳಿದ್ರೂ ಯಾವುದೇ ಆದೇಶ ಪ್ರತಿ ಇಲ್ಲಾ. ಆಡಳಿತಾತ್ಮಕ ಹಿತ ದೃಷ್ಟಿಯಿಂದ ಅವರಿಗೆ ಜವಾಬ್ದಾರಿ ನೀಡಲಾಗಿದೆ ಅಂತಾ ತಾಲೂಕು ಪಂಚಾಯಿತಿ ಉತ್ತರ ಕೊಟ್ಟೈತಿ.
ಇನ್ನೂ ಮುಖ್ಯವಾಗಿ ನಾಲ್ಕು ಜನ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಬದಲಾದ್ರೂ, ಕೆ.ಎನ್.ಮುಲ್ಲಾ ಅವರ ಹುದ್ದೆ ಯಾರು ಪರಿಶೀಲನೆ ಮಾಡೇ ಇಲ್ಲಾ.
ಸಹಾಯಕ ಲೆಕ್ಕಾಧಿಕಾರಿ ಹುದ್ದೆ ನಿಭಾಯಿಸೋ ಕೆ.ಎನ್.ಮುಲ್ಲಾ ಅವರ ಬಗ್ಗೆ ವಿವಿಧ ಇಲಾಖೆಗಳ ಮುಖ್ಯಸ್ಥರುಗಳಿಂದ ಹಾಗೂ ಗುತ್ತಿಗೆದಾರರಿಂದ ಸಾಕಷ್ಟು ದೂರು ಸ್ವತಃ ಜಿಲ್ಲಾ ಪಂಚಾಯತ್ ಸಿಇಒ ಮೇಡಂ ತಲುಪಿದ್ದರೂ ಏನು ಪ್ರಯೋಜನ ಆಗಿಲ್ಲಾ.
ಸಹಾಯಕ ಲೆಕ್ಕಾಧಿಕಾರಿ ಕಾರ್ಯ ನಿರ್ವಹಿಸೋ ಕೆ.ಎನ್.ಮುಲ್ಲಾ ಸಾಹೇಬ್ರು ತಿಂಗಳಿಗೆ ತಮ್ಮ ವೇತನದ ಜೊತೆ 3-4 ಸಾವಿರ ರೂಪಾಯಿ ಸಿಬ್ಬಂದಿ ವೇತನ ಮಾಡಿದ್ದಕ್ಕೆ ಹೆಚ್ತುವರಿ ತಗೋಂಡು ಆರಾಮ ಅದಾರ್..
ಆ ಮ್ಯಾಗ್ ತಾಲೂಕು ಪಂಚಾಯಿತಿ ಎಸಿ ಮತ್ತು ಡಿಸಿ ಬಿಲ್ ಜವಾಬ್ದಾರಿ ಇವರಿಗೆ ಐತಿ ನೋಡ್ರಿ…
ಸರ್ಕಾರದ ಯಾವುದೇ ಆದೇಶ ನಿಯಮ ಎಲ್ಲಾ ಗಾಳಿಗೆ ತೂರಿ ಕುಂದಗೋಳ ತಾಲೂಕು ಪಂಚಾಯಿತಿ ಒಳಗ್ ಯಾರ್ ಬೇಕಾದ್ರೂ ಏನ್ ಆದ್ರೂ ಮಾಡತಾರ್.
ಇವರಿಗೆ ಹೇಳೋರು, ಕೇಳೋರು ಯಾರು ಇಲ್ಲಾ.
ಮತ್ತ್ ಸಿಇಒ ಮೇಡಂ ನಿಮಗೆ ಗೊತ್ತಿರಲಿ ನಮ್ಮ ಕೆ.ಎನ್.ಮುಲ್ಲಾ ಸಾಹೇಬ್ರ ಮಾತೇ ಎತ್ತಿದ್ರೇ ಸಾಕು ಸಿಎಂ, ಪಿಎಂವರೆಗೂ ಇನ್ಶುಲೆನ್ಸ ಹೇಳ್ತಾರ್ರೀ.. ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರೋ ಎಲ್ಲಾ ಇಲಾಖೆಗೂ ಬಾಳ್ ಬ್ಯಾಸರ್ ಆಗ್ತಾರಂತ ನೋಡ್ರಿ.
ಮತ್ತೋಮ್ಮೆ ನಮಸ್ಕಾರ ರೀ… ಮೇಡಂ ಹೇಳೋದು ಹೇಳಿವಿ ನೋಡ್ರಿ…