ಹುಬ್ಬಳ್ಳಿ: ವ್ಯಕ್ತಿಯೋರ್ವರಿಂದ 1,28,97702 ರೂ. ಮೌಲ್ಯದ ಬಂಗಾರದ ಗಟ್ಟಿಯನ್ನು ಖರೀದಿ ಮಾಡಿ ಹಣವನ್ನು ಮರಳಿ ನೀಡಿದೆ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಾಂಗ್ಲಿ ಮೂಲದ ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಶರದ್ ಸುರ್ವೆ ಎಂಬ ಆರೋಪಿಯೇ ಹುಬ್ಬಳ್ಳಿ ನಗರದ ಹೊಸೂರಿನ ನಿವಾಸಿ ಶುಭಂ ಪಾಟೀಲ್ ಇವರಿಗೆ ವಂಚನೆ ಮಾಡಿದ್ದಾನೆ.
ಆರೋಪಿ ಇಲ್ಲಿನ ಗೌಳಿಗಲ್ಲಿಯಲ್ಲಿ ಬಂಗಾರದ ಕಛೇರಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದ್ದು, ನವೆಂಬರ್ 1 ರಂದು ಆರೋಪಿ ಶರದ್ ಕಡೆಗೆ 1,28,97702 ರೂ. ಮೌಲ್ಯದ 1 ಕೆಜಿ 200 ಮಿಲಿ ಗ್ರಾಂವುಳ್ಳ 2 ಬಂಗಾರದ ಗಟ್ಟಿಗಳನ್ನು ಖರೀದಿ ಮಾಡಿ ಹಣವನ್ನು ನವೆಂಬರ್ 3 ರಂದು ಆರ್.ಟಿ.ಜಿ.ಎಸ್. ಮಾಡುತ್ತೇನೆಂದು ಹೇಳಿ ಇಲ್ಲಿಯವರೆಗೂ ಬಂಗಾರವನ್ನು ಖರೀದಿ ಮಾಡಿದ ಹಣವನ್ನು ಕೊಡದೇ ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದಾನೆಂದು ಶುಭಂ ಪಾಟೀಲ್ ಅವರು ಡಿಸೆಂಬರ್ 6 ರಂದು ಶಹರ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಶರಹ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.