ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ದೇವಿಗೆ ಹಾಕಿದ್ದ 3.50 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಸ್ವಾಮಿ ವಿವೇಕಾನಂದ ಮಾರ್ಗದ ಶಂಭಾಗಿ ಲೇಔಟ್ನಲ್ಲಿ ನಡೆದಿದೆ.
ಅಮಿತ್ ಕಾಟವೆ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಲಕ್ಷ್ಮೀ ಪೂಜೆ ಮಾಡಿದ್ದಾಗ ದೇವಿಯ ಮೂರ್ತಿಗೆ ಆಭರಣ ಹಾಕಿದ್ದರು. ರಾತ್ರಿ ಕಳ್ಳರು ಅಡುಗೆ ಮನೆಯ ಕಿಟಕಿ ತೆಗೆದು, ಕೋಲಿನ ಸಹಾಯದಿಂದ ಮೂರ್ತಿಗೆ ಹಾಕಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ.
2.8 ಕೆಜಿ ಗಾಂಜಾ ವಶ; ಬಾಲಕ ಸಮೇತ 6 ಜನರ ಬಂಧನ
ಹುಬ್ಬಳ್ಳಿ: ಗಾಂಜಾ ಸಾಗಿಸುತ್ತಿದ್ದ ಓರ್ವ ಬಾಲಕ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿ, ಅಂದಾಜು 2.8 ಲಕ್ಷ ರೂ. ಮೌಲ್ಯದ 2.8 ಕೆಜಿ ಗಾಂಜಾ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ನಗರದ ನಿವಾಸಿಗಳಾದ ಮತ್ತುಮ್ ಮೊರಬ, ತೌಸಿಫ್ ಅಕ್ರಮ ಹಾಲಬಾವಿ, ಸಾಹಿಲ ನದಾಫ, ಜಾಫರ, ಬಬಲು ಎಂಬುವರೆ ಬಂಧಿತರಾದವರು. ಇವರು ಕುಸುಗಲ್ ರಸ್ತೆ ರೈಲ್ವೆ ಸೇತುವೆ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದರು, ಇನ್ನೂ ಖಚಿತ ಮಾಹಿತಿ ಮೇರೆಗೆ ಹುಬತ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಸೇರಿ ಆರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ಈ ಕುರಿತು ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.