ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಗುಂಪೊಂದು ಜಾತಿ ನಿಂದನೆ ಮಾಡಿ, ಹಲ್ಲೇ ಮಾಡಿರುವ ಘಟನೆ ಗೋಪ್ಪನಕೊಪ್ಪದ ಗೊಲ್ಲರ ಓಣಿಯಲ್ಲಿ ನಡೆದಿದೆ.
ರಾಹುಲ್ ಹಕ್ಕಲಮನಿ (23) ಹಲ್ಲೆಗೆ ಒಳಗಾದ ಯುವಕನಾಗಿದ್ದು, ಈತ ಗೊಪ್ಪನಕೊಪ್ಪದ ಡೊಂಬರ್ ಓಣಿಯ ನಿವಾಸಿಯಾಗಿದ್ದಾನೆ. ಈತನ ಮೇಲೆ ಗೊಪ್ಪನಕೊಪ್ಪದ ರಾಜು ಕಟ್ಟಿಮನಿ, ಅರವಿಂದ ಗೊಲ್ಲರ್, ವಿನಾಯಕ ಗೊಲ್ಲರ್, ಜಗದೀಶ್ ಗೊಲ್ಲರ್, ಪರಸು ಗೊಲ್ಲರ್ ಎಂಬಾತರೇ ಹಲ್ಲೇ ಮಾಡಿದ್ದಾರೆ.
ರಾಹುಲ್ ಹಕ್ಕಲಮನಿ, ಹಲ್ಲೆಗೆ ಒಳಗಾದ ಯವಕ
ಕಳೆದ ಮೇ.10 ರಂದು ರಾತ್ರಿ 9.30 ರ ಸುಮಾರಿಗೆ ಸುಮಾರಿಗೆ ರಾಹುಲ್ ಹಕ್ಕಲಮನಿ ಗೊಪ್ಪನಕೊಪ್ಪದ ಬಸ್ ನಿಲ್ದಾಣದ ಬಳಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ರಾಜು ಕಟ್ಟಿಮನಿ ಎಂಬಾತ ಜಾತಿ ನಿಂದನೆ ಮಾಡಿದ್ದಾನೆ. ಇದನ್ನು ರಾಹುಲ್ ಕೇಳಿದಕ್ಕೆ ತಮ್ಮ ಸಹಚರರನ್ನು ಕರೆಸಿ ದತ್ತು ಪಂತ ಮಹಾರಾಜರ ದೇವಸ್ಥಾನದ ಬಳಿಯಲ್ಲಿ ಕರೆದೊಯ್ದು ಕಟ್ಟಿಗೆಯಿಂದ ಕಾಲಿಗೆ ಹೊಡೆದು, ಬಳಿಕ ಕಬ್ಬಿಣದ ರಾಡಿನಿಂದ ಕೈ, ಕಾಲು, ತಲೆ ಮತ್ತು ಮುಖಕ್ಕೆ ಹೊಡೆದು, ಕೆಳಗೆ ಬಿಳಿಸಿ ಮನಬಂದಂತೆ ಕಾಲಿನಿಂದ ಒದ್ದು ಹಲ್ಲೇ ಮಾಡಿದ್ದಾರಂತೆ.
ಇನ್ನು ಗಂಭೀರವಾಗಿ ಗಾಯಗೊಂಡ ರಾಹುಲ್’ನನ್ನು ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಈ ಬಗ್ಗೆ ಅಶೋಕ ನಗರ ಪೋಲಿಸ್ ಠಾಣೆಯಲ್ಲಿ ಐದು ಜನರ ಮೇಲೆ IPC 1860 (U/s-143, 147, 323, 324, 504, 149) ಹಾಗೂ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.