ಅಪರಾಧಜಿಲ್ಲೆ

ಹುಬ್ಬಳ್ಳಿ: ಟ್ರಾಫಿಕ್ ಪೋಲಿಸರ ಸಮಯ ಪ್ರಜ್ಞೆ, ತಪ್ಪಿದ ಅನಾಹುತ

ಹುಬ್ಬಳ್ಳಿ: ಟ್ರಾಫಿಕ್ ಪೋಲಿಸ್ ಅಂದರೇ ಸಾಕು ತಕ್ಷಣವೇ ನೆನಪಿಗೆ ಬರೋದು ವಾಹನ ತಪಾಸಣೆ ನೆಪದಲ್ಲಿ ಹಣ ದೋಚುತ್ತಾರೆ. ಎಲ್ಲಾ ಡಾಕುಮೆಂಟ್ಸ್ ಇದ್ರೂ ಸಹ ಬೇರೆ ಕಾರಣ ಹೇಳಿ ನೋಟಿಸ್ ಕೋಡ್ತಾರೆ ಅಂತಾ, ಆದರೆ ಇಲ್ಲಿನ ಟ್ರಾಫಿಕ್ ಪೋಲಿಸರು ಮಾಡಿರುವ ಕೆಲಸಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಇಂದುಸಂಜೆ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ ತುಂಬೆಲ್ಲಾ ಸೋರಿತ್ತು.

ಪರಿಣಾಮ ಅದೇ ರಸ್ತೆಯಲ್ಲಿ ಓಡಾಟ ನಡೆಸುವ ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಬೈಕ್’ಗಳು ಸ್ಕಿಡ್ ಆಗುವ ಸಂಭವ ಹೆಚ್ಚಾಗಿತ್ತು. ಇದನ್ನು ಗಮನಿಸಿದ ಪೂರ್ವ ಸಂಚಾರಿ ಪೋಲಿಸ್ ಠಾಣೆಯ ಪೋಲಿಸರು ತಕ್ಷಣವೇ ಎಚ್ಚೆತ್ತುಕೊಂಡು ಪಿಎಸ್ ಐ ಪುನಿತ್ ಕುಮಾರ್ ಹಾಗೂ ಎಎಸ್ ಐ ಎಸ್.ಎನ್ ಬಜಂತ್ರಿ ನೇತೃತ್ವದಲ್ಲಿ ರಸ್ತೆ ಮೇಲೆ ಮಣ್ಣು ತಂದು ಹಾಕುವ ಮೂಲಕ ಅದೆಷ್ಟೋ ಬೈಕ್ ಸವಾರರ ಪ್ರಾಣ ಉಳಿಸಿದ್ದಾರೆ.

ಇನ್ನೂ ತಮ್ಮ ಕೆಲಸ ಒತ್ತಡದ ನಡುವೆಯೂ ಸಾರ್ವಜನಿಕರ ಪ್ರಾಣ ಹಾಗೂ ಇತರ ಘಟನೆ ಆಗದಂತೆ ನೋಡಿಕೊಂಡಿರುವ ಸಂಚಾರಿ ಪೋಲಿಸರ ಕಾರ್ಯಕ್ಕೆ ಹುಬ್ಬಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಎಎಸ್.ಐ ಎಂ.ಜಿ.ವೊಟೆಗಳ್ಳಿ, ಬಿ.ಬಿ.ಮಾಯಣ್ಣವರ, ಸಿಬ್ಬಂದಿಗಳಾದ ನವೀನ ಸೇರಿದಂತೆ ಇತರರು ಇದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
1
+1
0
+1
0
+1
0
+1
1
+1
0

Related Articles

Leave a Reply

Your email address will not be published. Required fields are marked *

Back to top button