ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ ಉತ್ಸಾಹದಿಂದ ಧಾವಿಸಿ ಮತ ಚಲಾಯಿಸುತ್ತಿದ್ದಾರೆ.
ಹನ್ನೊಂದು ಗಂಟೆಯ ನಂತರ ಬಿಸಿಲು ನೆತ್ತಿ ಸುಡುವ ಕಾರಣಕ್ಕೆ ಮತದಾರರು ಬೆಳಗ್ಗೆಯೇ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಪರಿಣಾಮ ಮತ ಕೇಂದ್ರಗಳು ರಶ್ ಆಗಿವೆ ಹಾಗೂ ಉತ್ಸಾಹ ಕಂಡುಬಂದಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬೆಳಗ್ಗೆ 11 ಗಂಟೆ ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ 24 ರಷ್ಟು ಮತದಾನವಾಗಿದೆ. ಇಲ್ಲಿ ಒಟ್ಟು 18.31.975 ಮತದಾರರಿದ್ದು, 9 ಗಂಟೆ ವೇಳೆ ಶೇ.24 ರಷ್ಟು ಮತಗಳು ಚಲಾವಣೆ ಆಗಿದೆ.
ನವಲಗುಂದ 23.21 ಶೇ., ಕುಂದಗೋಳ 18.69ಶೇ., ಧಾರವಾಡ 25.08ಶೇ., ಹುಬ್ಬಳ್ಳಿ-ಧಾರವಾಡ ಪಶ್ಚಿಮ 26.66 ಶೇ., ಹು-ಧಾ ಕೇಂದ್ರ 26.21ಶೇ., ಹು-ಧಾ ಪೂರ್ವ 24.97 ಶೇ., ಕಲಘಟಗಿ 23.97ಶೇ., ಶಿಗ್ಗಾಂವಿ 21.17ಶೇ. ಮತದಾನವಾಗಿದೆ.
ಮುಂದಿನ ಶೇಕವಾರು ಮತದಾನವನ್ನು ಮಧ್ಯಾಹ್ನ ಒಂದು ಗಂಟೆಯ ಬಳಿಕ ಪ್ರಕಟಿಸಲಾಗುವದು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
1
+1
+1
+1
+1
+1
+1