ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಧಾರವಾಡ ಲೋಕಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪುನಃ ನಾಮಪತ್ರ ವಾಪಾಸ್ ಪಡೆದುಕೊಂಡ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ್ ಜೋಶಿ ವಿರುದ್ಧ ಸಮರ ಸಾರಿರುವ ದಿಂಗಾಲೇಶ್ವರ ಶ್ರೀಗಳು ನೇರಾನೇರವಾಗಿ ಜೋಶಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಧಾರವಾಡ ಲೋಕಸಭಾ ಮತಕ್ಷೇತ್ರದಾದ್ಯಂತ ಸಂಚರಿಸಿ ಭಕ್ತರು ಹಾಗೂ ಮತದಾರ ಸಭೆ ನಡೆಸುತ್ತಿದ್ದಾರೆ. ಪ್ರಲ್ಹಾದ್ ಜೋಶಿ ಅವರಿಗೆ ಮತ ನೀಡಬೇಡಿ, ಅವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ.
ಅದರಂತೆ ಏ.2 ರಂದು ನವಲಗುಂದ ಪಟ್ಟಣದ ಗಾಂಧಿ ಮಾರ್ಕೆಟ್’ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಫಕೀರ್ ದಿಂಗಾಲೇಶ್ವರ ಶ್ರೀಗಳು ಭಾಗವಹಿಸಿದ್ದು, ಈ ವೇಳೆ ಭಕ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ತಮ್ಮ ಜಾತಿಯವರನ್ನು ಪ್ರೀತಿಸಿದಷ್ಟು ಬೇರೆ ಯಾವ ಜಾತಿಯವರನ್ನು ಪ್ರೀತಿ ಮಾಡುವುದಿಲ್ಲ, ಮೊದಲು ಎಲ್ಲ ಜಾತಿಯವರು ಬಸ್ಮ ಹಚ್ಚಿಕೊಳ್ಳುತ್ತಿದ್ದರು, ಇದೀಗ ಬಸ್ಮ ಹೋಗಿ ಕುಂಕುಮ, ಬಂಡಾರ ಹೋಗಿ ಕುಂಕುಮ ಬಂದಿದೆ ಎಂದು ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ, ಸಮೂದಾಯ, ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವೈರತ್ವ ಮತ್ತು ದ್ವೇಷ ಉಂಟು ಮಾಡುವ ಹೇಳಿಕೆ ನಿಡಿದ್ದಾರೆ ಎಂದು ಆರ್.ಕುಮಾರಸ್ವಾಮಿ ಅವರು ದೂರು ದಿಂಗಾಲೇಶ್ವರ ಶ್ರೀಗಳ ವಿರುದ್ಧ ದೂರು ನೀಡಿದ್ದಾರೆ.
ಸದ್ಯ ನವಲಗುಂದ ಪೋಲಿಸ್ ಠಾಣೆಯಲ್ಲಿ represention of people act 1950, 1951, 1989 (u/s-123 (3A), 125), IPC 1890 (u/s-505(2)) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.