ಹಾವೇರಿ: ಅನುಮತಿಯಿಲ್ಲದೆ ಹಾವೇರಿ ನಗರದ ಕಾಲೇಜಿವೊಂದರಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿರುವ ಆರೋಪದಡಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ಏ. 27ರಂದು ಬೊಮ್ಮಾಯಿ ಅವರು ನಗರದ ಆಯುರ್ವೇದ ಕಾಲೇಜಿನಲ್ಲಿ ತಮ್ಮ ಲೋಕಸಭಾ ಚುನಾವಣೆ ಪ್ರಚಾರ ಸಭೆ ನಡೆಸಿದ್ದರು.
ಸದ್ಯ ನೀತಿಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ಹಾಗೂ ನೀತಿ ಸಂಹಿತೆ ಅನ್ವಯ ನಿಷೇಧಿತ ಪ್ರದೇಶವಾದ ವಿದ್ಯಾಸಂಸ್ಥೆಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ. ಅಲ್ಲದೆ, ಫೇಸ್ಬುಕ್ನಲ್ಲಿ ಹಂಚಿಕೊಳ್ಳುವ ಮೂಲಕ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಎಫ್ಎಸ್ಟಿ ಟೀಮ್-2 ಮುಖ್ಯಸ್ಥ ರಾಮಕೃಷ್ಣ ದೂರು ದಾಖಲಿಸಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1