ಹುಬ್ಬಳ್ಳಿ: ದಿಂಗಾಲೇಶ್ವರ ಶ್ರೀಗಳಿಗೆ ಪೇಮೆಂಟ್ ಬಂದಿಲ್ಲ, ಹೀಗಾಗಿ ನಾಮಪತ್ರವನ್ನು ವಾಪಾಸ್ ಪಡೆದುಕೊಂಡರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೊಮ್ಮೆ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕುಂದಗೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹಣ ಪಡೆದಿಲ್ಲ ಎಂಬುದನ್ನು ಅವರೇ ಸಾಬೀತು ಪಡಿಸಿಕೊಳ್ಳಬೇಕು. ಅವರು ಹಣ ಪಡೆದಿಲ್ಲ ಎನ್ನುವುದಕ್ಕೆ ಅವರೇ ಸಾಕ್ಷಿ ಹೇಳಬೇಕು. ಅವರು ಹಣ ಪಡೆಯದೇ ಹೋಗಿದ್ದರೆ ನಾಮಪತ್ರವನ್ನು ಯಾಕೆ ವಾಪಾಸ್ ಪಡೆಯಬೇಕಿತ್ತು ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ ಯತ್ನಾಳ, ಒಂದೇ ಮಾತಿಗೆ ವಿಧಾನಸಭಾ ಚುನಾವಣೆಯಿಂದ ಈಶ್ವರಪ್ಪ ಅವರು ಹಿಂದೆ ಸರಿದರು. ಅವರನ್ನು ಲೋಕಸಭೆಯಲ್ಲಿ ಪರಿಗಣಸಿಬೇಕಿತ್ತು. ಆದರೆ ಏನೋ ತಪ್ಪು ಗ್ರಹಿಕೆ ಆಗಿದೆ ಎಂದಿದ್ದಾರೆ.
ಇದೆಲ್ಲ ಲೋಕಸಭಾ ಚುನಾವಣೆ ಬಳಿಕ ಸರಿಯಾಗಲಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
1
+1
+1
+1