ಹುಬ್ಬಳ್ಳಿ: ಮಡಿಕಲ್ ಶಾಪ್’ಗೆ ಹೆಲ್ಮೆಟ್ ಧರಿಸಿಕೊಂಡು ಬಂದ ಗ್ರಾಹಕನೊರ್ವ ಕೈಗೆ ಸಿಕ್ಕ ವಸ್ತು ಹಾಗೂ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.
ಇಲ್ಲಿನ ಅಪೋಲೊ ಮೆಡಿಕಲ್ ಸ್ಟೋರ್ ನಲ್ಲಿಯೇ ಕಳ್ಳತನವಾಗಿದ್ದು, ಕಳ್ಳನ ಕೈಚಳಕ ಶಾಪ್’ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೆಡಿಸಿನ್ ಖರೀದಿಯ ನೆಪದಲ್ಲಿ ಕೆಲಸಗಾರರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.
ಇನ್ನು ಮೆಡಿಕಲ್ ಶಾಪ್ ಗಳನ್ನು ಟಾರ್ಗೆಟ್ ಮಾಡಿರುವ ಈ ಐನಾಯಿ ಕಳ್ಳ, ಹೆಟ್ಮೇಟ್ ಧರಿಸಿಕೊಂಡು ಎಂಟ್ರಿ ಕೊಟ್ಟು ವಿವಿಧ ಕಂಪನಿಗಳ ಮೆಡಿಸಿನ್ ಕೇಳಿ, ಉದ್ಯೋಗಿಯ ಗಮನವನ್ನು ಬೇರೆಡೆ ಸೆಳೆದು ಮೆಡಿಸಿನ್ ಜೊತೆಗೆ ಹಣದ ಸಮೇತವಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತಿಚೆಗೆ ಸಣ್ಣಪುಟ್ಟ ಕಳ್ಳತನಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಪೋಲಿಸರು ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1