ಹುಬ್ಬಳ್ಳಿ: ವ್ಯಕ್ತಿಯೊರ್ವ ಅನುಮಾನಸ್ಪವಾಗಿ ಸಾವನ್ನಪ್ಪಿದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಹೊರವಲಯದ ತಾರಿಹಾಳ ರಸ್ತೆಯಲ್ಲಿನ ಲೋಟಸ್ ಬಾರ್ ಹತ್ತಿರದ ಜಮೀನುವೊಂದರಲ್ಲಿ ಜರುಗಿದೆ.
ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಷಣ್ಮುಖಪ್ಪ ಹಡಪದ (55) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಮೃತನ ಪಕ್ಕ ಮದ್ಯದ ಬಾಟಲಿಗಳು ಬಿದ್ದಿದ್ದು, ರವಿವಾರ ಮದ್ಯ ಸೇವಿಸಿ, ಹೊಟ್ಟೆ ನೋವು ತಾಳಲಾರದೇ ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟ್ಟಕ್ಕೆ ಹೇಳಲಾಗುತ್ತಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕೆ ಷಣ್ಮುಖಪ್ಪ ಮೃತಪಟ್ಟಿದ್ದಾನೆ ಎಂಬ ಬಗ್ಗೆ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1
1