ಹುಬ್ಬಳ್ಳಿ: ಹೋಳಿ ಹಬ್ಬದ ನಿಮಿತ್ತವಾಗಿ ಇಂದು ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು.
ಉಪನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಕವಿತಾ ಮಾಡಗ್ಯಾಳ ನೇತೃತ್ವದಲ್ಲಿ ಜನತಾ ಬಜಾರ, ಕಿತ್ತೂರು ಚೆನ್ನಮ್ಮ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣೆ ಹಾಗೂ ಹೊಳಿ ಹುಣ್ಣುಮೆ ಸಮೀಪಿಸುತ್ತಿದ್ದಂತೆ ಸಾರ್ವಜನಿಕರಿಗೆ ತಿಳಿ ಹೇಳುವ ಕೆಲಸ ಮಾಡಿದರು.
ಹೊಳಿ ಹುಣ್ಣುಮೆ ದಿನದಂದು ಯಾವುದೇ ಕಾರಣಕ್ಕೂ ಕೆಮಿಕಲ್ ಬಣ್ಣವನ್ನು ಬಳಸಬಾರದು, ಒತ್ತಾಯ ಪೂರಕವಾಗಿ ಬಣ್ಣ ಹಚ್ಚಬಾರದು, ಹದಿನೆಂಟು ವಯಸ್ಸಿನ ಕೆಳಗೆ ಇರುವ ಮಕ್ಕಳ ಕೈಯಲ್ಲಿ ಬೈಕ್ ನೀಡಬಾರದು, ಜತೆಗೆ ಯುವಕರು ಹುಡುಗಿಯರನ್ನು ಚುಡಾಯಿಸಿದ್ರೇ ಪ್ರಕರಣ ದಾಖಲಾಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಲ್ಲದೆ ಇತ್ತೀಚಿನ ದಿನದಲ್ಲಿ ಸೈಬರ್ ಕ್ರೈಮ್ ಪ್ರಕರಣ ಹೆಚ್ಚುತ್ತಿವೆ ಆದ್ದರಿಂದ ಅಪರಿಚಿತರಿಗೆ ಬ್ಯಾಂಕ್ ಡಿಟೈಲ್ಸ್ ನೀಡಿದಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪನಗರ ಪೋಲಿಸ್ ಠಾಣೆ ಎಸ್ಐ ತೊಬಾಕಿ ಹಾಗೂ ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.