ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಾಲಿದ್ದಾರೆಂಬ ಕುತೂಹಲ ಎಲ್ಲೆಡೆ ಮನೆ ಮಾಡಿದ್ದು, ಕೇಂದ್ರದಲ್ಲಿ ಪ್ರಭಾವಿಯಾಗಿರುವ ಸಚಿವ ಪ್ರಲ್ಹಾದ ಜೋಶಿ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಪ್ರಯಾಸ ಪಡುವಂತಾಗಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಕುತೂಹಲ ಸೃಷ್ಟಿಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಮುನಿಸಿಕೊಂಡ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ ಮತ್ತೆ ಬಿಜೆಪಿ ಸೇರ್ಪಡೆ ಯಾಗಿರುವ ಹಿನ್ನಲೆಯಲ್ಲಿ ಜೋಶಿ ಟಿಕೆಟ್ ಗಾಗಿ ಏದುಸಿರು ಬಿಡುತ್ತಿದ್ದಾರೆ.
ಪ್ರಲ್ಹಾದ್ ಜೋಶಿ, ಹಾಲಿ ಸಂಸದ
ಜೋಶಿ ಮತ್ತು ಶೆಟ್ಟರ ಮಧ್ಯೆ ಭಾರಿ ಪೈಪೋಟಿ ಮುಂದುವರಿದಿದ್ದು, ಬಿಎಸ್ ವೈ ಶೆಟ್ಟರ್ ಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೋಶಿ, ಚುನಾವಣೆ ಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವೆ, ಜಿಲ್ಲೆಯ ಬಿಜೆಪಿ ಮುಖಂಡರು, ಶಾಸಕರ ಬೆಂಬಲ ಇದೆ. ಸಾಕಷ್ಟು ಕೆಲಸ ಮಾಡಿದ್ದು ನನಗೆ ಟಿಕೆಟ್ ಕೊಡಬೇಕೆಂದು ನಾನಾ ಕಡೆಗಳಿಂದ ಒತ್ತಡ ತಂತ್ರ ಹೇರುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಗೃಹ ಸಚಿವ ಅಮಿತ್ ಶಾ ಕೂಡ ಶೆಟ್ಟರ್ ಪರ ಒಲವು ತೋರಿದ್ದು, ಅವರಿಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ. ನೀವು ಉತ್ತರ ಕನ್ನಡ (ಕಾರವಾರ) ಜಿಲ್ಲೆಯಿಂದ ಸ್ಪರ್ಧಿಸುವಂತೆ ಆಫರ್ ಕೊಟ್ಟಿದ್ದಾರೆ ಎಂದು ಕಡ್ಡಿ ಮುರಿದಂತೆ ಶಾ ಹೇಳಿದ್ದಾರೆ ಎಂದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಟಿಕೆಟ್ ಆಕಾಂಕ್ಷಿ
ಇತ್ತ ಶೆಟ್ಟರ ಹುಬ್ಬಳ್ಳಿಯಲ್ಲಿಯೇ ಇದ್ದುಕೊಂಡು ಟಿಕೆಟ್ ಗಿಟ್ಟಿಸುವ ಎಲ್ಲಾ ತಂತ್ರಗಳನ್ನು ಹೂಡುತ್ತಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವ ಜೋಶಿ ನಿತ್ಯವೂ ಹುಬ್ಬಳ್ಳಿ ದೆಹಲಿ ಗೆ ಓಡಾಡುತ್ತಿರುವುವುದು ಅವರ ಆತಂಕ ಏನು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಮಂಗಳವಾರದಂದು ಕಲಘಟಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಏರ್ಪೋರ್ಟ್ ಗೆ ತೆರಳಿದ್ದು, ಮನೆಯಿಂದ ಅವರ ಸಹೋದರ ಊಟ ಒಯ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಇನ್ನು ಇತ್ತ ಕಾಂಗ್ರೆಸ್’ನಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಹಿತ ಅಳೆದು ತೂಗಿ ಟಿಕೆಟ್ ನೀಡಲು ಮುಂದಾಗಿದೆ. ಹೀಗಾಗಿಯೇ ಜಾತಿ ಲೆಕ್ಕಾಚಾರ ಹಾಕಿ ನೋಡಿದಾಗ ಹಾವೇರಿಯಲ್ಲಿ ಜಂಗಮರಿಗೆ ಟಿಕೆಟ್ ನೀಡಲಾಗಿದ್ದು, ಇದರಿಂದ ಧಾರವಾಡ ಅಭ್ಯರ್ಥಿಗಳ ಪಟ್ಟಿಯಲ್ಲಿ ರಜತ್ ಉಳ್ಳಾಗಡ್ಡಿಮಠ ಹೆಸರು ಅಳಿಸಲಾಗಿದೆ. ಹೀಗಾಗಿ ಧಾರವಾಡ ಲೋಕಸಭಾ ಟಿಕೆಟ್ ಮೋಹನ್ ಲಿಂಬಿಕಾಯಿ, ವಿನೋದ ಅಸೂಟಿ, ಶಿವಲೀಲಾ ಕುಲಕರ್ಣಿ ನಾಯ್ಕರ ಹೆಸರುಗಳು ನಾಯಕರ ಮುಂದಿದ್ದು, ಕೊನೆಯ ಕ್ಷಣದಲ್ಲಿ ಸಚಿವ ಸಂತೋಷ ಲಾಡ್ ಅವರನ್ನು ಚುನಾವಣೆಗೆ ಇಳಿಸಿದರು ಅಚ್ಚರಿಯಿಲ್ಲ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ ಇಂದು ಅಥವಾ ನಾಳೆ ಹೈಕಮಾಂಡ ಹೆಸರುಗಳನ್ನು ಬಿಡುಗಡೆಗೊಳಿಸಲಿದೆ.
ಒಟ್ಟಾರೆಯಾಗಿ ಬಿಜೆಪಿ ಭದ್ರಕೋಟೆ ನಾ ಈ ಬಾರಿ ಕಾಂಗ್ರೆಸ್ ತನ್ನ ವಶಕ್ಕೆ ಪಡೆಯಲು ಇಲ್ಲದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದರೇ, ಬಿಜೆಪಿ ಈ ಬಾರಿಯೂ ಧಾರವಾಡದಲ್ಲಿ ವಿಜಯೋತ್ಸವ ಮುಂದುವರೆಸುವ ವಿಶ್ವಾಸದಲ್ಲಿದೆ.