ಹುಬ್ಬಳ್ಳಿಯಲ್ಲಿ ನಿರ್ಮಾಣವಾಯಿತು ಮಕ್ಕಳ ತುರ್ತು ಚಿಕಿತ್ಸಾ ವಾರ್ಡ್…!!
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಬಡವರ ಹೈಟೆಕ್ ಆಸ್ಪತ್ರೆ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಅತ್ಯಂತ ಕ್ಲಿಷ್ಟಕರ ಚಿಕಿತ್ಸೆಯ 45 ಬೆಡ್’ಗಳ ಮೂರು ವಿಶೇಷ ಅತ್ಯಾಧುನಿಕ ತಂತ್ರಜ್ಞಾನದ ವಾರ್ಡ್’ಗಳ ಲೋಕಾರ್ಪಣೆ ಕಾರ್ಯಕ್ರಮ ಮಾ.11 ರಂದು ಬೆಳಿಗ್ಗೆ 11.30 ರಂದು ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಸ್ವರ್ಣಾ ಗ್ರೂಪ್ ಕಂಪನಿಗಳ ಮಾಲೀಕರಾದ ಡಾ.ವಿ.ಎಸ್.ವಿ ಪ್ರಸಾದ್, ಕಿಮ್ಸ್ ಆಸ್ಪತ್ರೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಗರ್ಭಿಣಿಯರು ಹೆರಿಗೆಗಾಗಿ ಹಾಗೂ ಬಡ ಮಹಿಳೆಯರ ಕ್ಲಿಷ್ಟಕರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ನವಜಾತ ಶಿಶುಗಳು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಅದಕ್ಕೆ ತಕ್ಕ ಹಾಗೇ ಕ್ಲಿಷ್ಟಕರ ಚಿಕಿತ್ಸೆಯನ್ನು ನಿಭಾಯಿಸುವಂತಹ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿರುವ ವಾರ್ಡ್’ನ ಕೊರತೆ ಇತ್ತು. ಇದನ್ನು ಅನುಲಕ್ಷಿಸಿ ಕಿಮ್ಸ್ ವೈದ್ಯರ ಬೇಡಿಕೆಗೆ ಮಣಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಲಹೆ ಮೇರೆಗೆ ತಾವು ಬರೀ ನೂತನ ವಾರ್ಡ್’ಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ದಾನ ಮಾಡುವ ಪ್ರಕ್ರಿಯೆಗೆ ಹೋಗದೇ, ಕಿಮ್ಸ್’ಗೆ ಭೇಟಿ ನೀಡಿ, ನವಜಾತ ಶಿಶುವಿನ ವಾರ್ಡ್ ಸಂಪೂರ್ಣವಾಗಿ ಪರಿಶೀಲಿಸಿ ನಾನೇ ನನ್ನ ಸ್ವಂತ ಖರ್ಚಿನಿಂದ ಅಂದಾಜು 1.50 ಕೋಟಿ ವೆಚ್ಚದಲ್ಲಿ ನನ್ನ ಉಸ್ತುವಾರಿಯಲ್ಲಿಯೇ ಇಡೀ ನೂತನ ನವಜಾತ ಶಿಶುಗಳ ವಾರ್ಡ್’ನ್ನು ಸಂಪೂರ್ಣವಾಗಿ ನಿರ್ಮಿಸಿ ಇದೀಗ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಡಾ.ಚಿ, ವಿ.ಎಸ್.ವಿ ಪ್ರಸಾದ್
ಇದು ನನಗೆ ಆತ್ಮತೃಪ್ತಿ ತಂದು ಕೊಡುವ ವಿಷಯ, ಯಾವುದೇ ನವಜಾತ ಶಿಶುವು ಇನ್ಮೇಲೆ ಈ ನೂತನ ವಾರ್ಡ್’ಗೆ ಚಿಕಿತ್ಸೆಗೆ ಬಂದರೆ ಮರಣಹೊಂದದೆ ಇರುವುದು ಗ್ಯಾರಂಟಿ. ಅದು ನಾನು ಮಾಡಿದ ಪುಣ್ಯ ಎಂದು ಭಾವಿಸಿದರು.
ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಮಾತನಾಡಿ, ಇಷ್ಟು ದಿನಗಳವರೆಗೆ ನಮ್ಮ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಹಾರೈಕೆಗೆ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ವಾರ್ಡ್ ಇರಲಿಲ್ಲ, ಈ ಕಾರಣದಿಂದ ವಾರ್ಡ್’ನಲ್ಲಿ ಶಿಶುಗಳ ಮರಣ ಸಂಖ್ಯೆ ಶೇ. 6 ರಿಂದ 8 ರಷ್ಟಿತ್ತು. ನೂತನ ವಾರ್ಡ್ ಲೋಕಾರ್ಪಣೆ ಬಳಿಕ ಅದು ಶೇ.4 ಕ್ಕಿಂತ ಕಡಿಮೆ ಬರುವುದು ನಿಶ್ಚಿತ ಎಂದರು.
ಡಾ.ಎಸ್.ಎಫ್.ಕಮ್ಮಾರ, ಕಿಮ್ಸ್ ನಿರ್ದೇಶಕರು
ಹಳೆಯ ವಾರ್ಡ’ಗಳಲ್ಲಿ ಒಂದೇ ಬೇಡ್’ನಲ್ಲಿ 3-4 ಶಿಶುಗಳನ್ನು ಮಲಗಿಸಿ ಚಿಕಿತ್ಸೆ ಕೊಡುವ ಪರಿಸ್ಥಿತಿ ಇತ್ತು. ಆದರೆ ನೂತನ ವಾರ್ಡ್’ನಲ್ಲಿ ಪ್ರತಿ ಮಗುವಿಗೂ ಪ್ರತ್ಯೇಕ ಬೆಡ್, ವಿಶ್ವದರ್ಜೆಯ ಇನ್ಯೂಬಿಟೆರ್ ಹಾಗೂ ತಕ್ಷಣ ಮಗುವಿಗೆ ಹಾಲು ಉಣಿಸುವಂತೆ ತಾಯಿಯವರಿಗೆ ಸಮೀಪದಲ್ಲಿಯೇ ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಇಂತಹ ಮಹಾನ್ ದಾನಿಗಳಿಂದ ಕಿಮ್ಸ್ ಆಸ್ಪತ್ರೆ ಇದೀಗ ಯಾವುದೇ ಖಾಸಗಿ ಹೈಟೆಕ್ ಆಸ್ಪತ್ರೆಗಳಿಗಿಂತ ಮಿಗಿಲಾದ ಚಿಕಿತ್ಸಾ ಸೌಲಭ್ಯ ಹೊಂದುವಂತಾಗಿದೆ. ಡಾ.ಪ್ರಸಾದ್ ಅವರ ರೀತಿಯಲ್ಲಿ ಇನ್ನು ಅನೇಕ ದಾನಿಗಳು ಮುಂದೆ ಬಂದರೆ ವಿವಿಧ ವಾರ್ಡ್’ಗಳಲ್ಲೂ ಇನ್ನೂ ಕ್ರಾಂತಿಕಾರಕ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಅಂದಿನ ಕಾರ್ಯವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಡಾ.ಭಾರತಿ ಪ್ರವೀಣ ಪವಾರ್ ಉದ್ಘಾಟನೆ ಮಾಡಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೋ.ಎಫ್.ಎಸ್.ಹೊಸಮನಿ, ಡಾ.ಮಾರ್ತಾಂಡಪ್ಪ, ಪ್ರಶಾಂತ ನಾಯಕ ಇದ್ದರು.