ಹುಬ್ಬಳ್ಳಿ; ಸಚಿವರ ಹುಟ್ಟುಹಬ್ಬದ ನಿಮಿತ್ತವಾಗಿ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಿಂದ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢರ ಮಠದವರೆಗೆ ಸುಮಾರು 20 ಕಿ.ಮೀ ಪಾದಯಾತ್ರೆ ಮಾಡಿದ್ದ ಯುವಕನನ್ನು ಧಾರವಾಡದಲ್ಲಿ ನಡೆದ ಮರಾಠಾ ಸಮಾಜದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಅವರು ಸನ್ಮಾನಿಸಿ ಗೌರವಿಸಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂತೋಷ್ ಲಾಡ್ ಅವರ ಜನ್ಮದಿನದ ನಿಮಿತ್ತವಾಗಿ ಅಲ್ಲಾಪೂರ ಗ್ರಾಮದ ನಿವಾಸಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾಗಿರುವ ಮಲ್ಲಿಕಾರ್ಜುನ ರಡ್ಡೇರ್ ಎಂಬ ಯುವಕ ಬರಿಗಾಲಿನಲ್ಲಿ ಶ್ರೀಮಠದವರೆಗೆ ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆದಿದ್ದರು.
ಅಲ್ಲದೇ ಲಾಡ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ತನ್ನ ಅಭಿಮಾನವನ್ನು ಮೆರೆದಿದ್ದರು. ಈ ವಿಷಯ ತಿಳಿದ ಸಂತೋಷ ಲಾಡ್ ಅವರು ಅಭಿಮಾನಿ ಮಲ್ಲಿಕಾರ್ಜುನ ರೆಡ್ಡೆರ್ ಅವರನ್ನು ಕರೆದು ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಮರಾಠಾ ಜಾಗೃತಿ ಸಮಾವೇಶ ಬಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ, ಗ್ರಾಮದ ಅಭಿವೃದ್ಧಿ ದಿಸೆಯಲ್ಲಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ.