ಹುಬ್ಬಳ್ಳಿ: ಸಂತೋಷ ಲಾಡ್ ಈ ಹೆಸರು ಇದೀಗ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಣ್ಣವರಿಂದ ಹಿಡಿದು ವೃದ್ದರವರೆಗೂ ಅವರು ಆಡುವ ಮಾತುಗಳು, ಮಾಡುವ ಕಾರ್ಯಗಳದ್ದೇ ಮಾತುಗಳು, ಅಂದಹಾಗೇ ಕಲಘಟಗಿ ಕ್ಷೇತ್ರದ ಶಾಸಕರಾಗಿರುವ ಸಂತೋಷ ಲಾಡ್, ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅತ್ಯುತ್ತಮ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಂತಹ ಕ್ರೀಯಾಶೀಲ ರಾಜಕಾರಣಿಗೆ ಇಂದು ಜನ್ಮದಿನ. ಅವರಿಗೆ ನಾಡಿನ ಉದ್ದಗಲಕ್ಕೂ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ನಾಯಕರು, ರಾಜ್ಯದ ಜನತೆಯಿಂದ ಜನ್ಮ ದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಅದರಂತೆ ಇಲ್ಲೊಬ್ಬ ಸಂತೋಷ ಲಾಡ್ ಅಭಿಮಾನಿಯೊಬ್ಬರು ಹುಬ್ಬಳ್ಳಿಯ ಪವಿತ್ರ ಧಾರ್ಮಿಕ ಕೇಂದ್ರ ಸಿದ್ದಾರೋಢಮಠಕ್ಕೆ ಪಾದಯಾತ್ರೆ ತೆರಳಿ ಉಭವ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ನಾಯಕರು ನೂರಕಾಲ ಆರೋಗ್ಯವಾಗಿರಲಿ, ಅವರಿಂದ ಅನೇಕ ಸಮಾಜಮುಖಿ ಕಾರ್ಯಗಳು ನೇರವೇರಲಿ ಎಂದು ಆಶಿಸಿದ್ದಾರೆ.
ಹೌದು, ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದ ಮಲ್ಲಿಕಾರ್ಜುನ ರೆಡ್ಡೆರ ಎಂಬಾತರೇ ಪಾದಯಾತ್ರೆ ಮೂಲಕ ಸಂತೋಷ ಲಾಡ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದು, ಇವರು ಗ್ರಾಮ ಪಂಚಾಯತಿ ಸದಸ್ಯರು ಕೂಡಾ ಆಗಿದ್ದಾರೆ.
ಮೊದಲಿಂದಲೂ ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿರುವ ಮಲ್ಲಿಕಾರ್ಜುನ ರೆಡ್ಡೆರ ಕ್ರೀಯಾಶೀಲ ಗುಣದ ರಾಜಕಾರಣಿಗಳನ್ನು ಮಾದರಿಯಾಗಿಟ್ಟುಕೊಂಡು ಅವರಂತೆ ಕೆಲಸ ಮಾಡತ್ತಾರೆ.
ಹೀಗಾಗಿ ಸಂತೋಷ ಲಾಡ್ ಅವರ ನಡೆಯಿಂದ ಪ್ರಭಾವಿತರಾಗಿ ತಮ್ಮ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು, ತಮ್ಮ ನಾಯಕನ ಜನ್ಮ ದಿನಕ್ಕೆ ಪಾದಯಾತ್ರೆ ಗೈದು ಅಭಿಯಾನ ಮೆರೆದಿದ್ದಾರೆ.
ಇನ್ನೂ ಸಂತೋಷ ಲಾಡ್ ನನ್ನ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳೇ ಸಾಕು! ಅನವಶ್ಯಕ ಖರ್ಚು ವೆಚ್ಚ ಮಾಡಿ ಹಾರ, ಉಡುಗೊರೆ, ಕೇಕ್, ಪೇಟಗಳನ್ನು ತರಬೇಡಿ.
ಇವುಗಳ ಬದಲಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಕನ್ನಡ ಪುಸ್ತಕ ಕೊಡಿಸಿ, ಅವರ ಶಿಕ್ಷಣಕ್ಕೆ ನೆರವಾಗಿ, ಬಡ ರೋಗಿಗಳಿಗೆ ಆಸರೆಯಾಗಿ.
ನಿಮ್ಮ ನಲ್ಮೆಯ ಆಶೀರ್ವಾದ ಮಾತ್ರ ನನಗೆ ಬೇಕು! ನೆನಪಿರಲಿ.
ಬದುಕಿನ ಮತ್ತೊಂದು ಹುಟ್ಟುಹಬ್ಬಕ್ಕೆ ಚಿಯರ್ಸ್! ಎಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಜನತೆಗೆ ತಿಳಿಸಿದ್ದಾರೆ.