ಹುಬ್ಬಳ್ಳಿ: ತಾಯಿಯ ಆರೋಗ್ಯ ವಿಚಾರಿಸಲು ಊರಿಗೆ ತೆರಳಿದ್ದ ಕುಟುಂಬಕ್ಕೆ ಕಳ್ಳರು ಶಾಕ್ ಕೊಟ್ಟಿದ್ದು, ಮನೆಯಲ್ಲಿನ ಒಟ್ಟು 1.25.500 ರೂ ಕಿಮ್ಮತ್ತಿನ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಹೌದು, ಈ ಒಂದು ಘಟನೆ ಉಪನಗರ ಠಾಣೆ ವ್ಯಾಪ್ತಿಯ ದೇಶಪಾಂಡೆ ನಗರದ ವಡ್ಡರ ಓಣಿಯಲ್ಲಿ ಜರುಗಿದೆ. ಮಂಜುಳಾ ಜಾದವ್ ಎಂಬಾತರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಇವರು ಫೆ.15 ರಂದು ತಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಧಾರವಾಡದ ಮದಿಹಾಳಕ್ಕೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಕದ್ದಿಮರು ಮನೆಯ ಕೀಲಿ ಮುರಿದು ಟ್ರೀಜೀರಿಯ ವ್ಯಾನಿಟಿ ಬ್ಯಾಗ್’ದಲ್ಲಿ ಇಟ್ಟಿದ್ದ 25 ಗ್ರಾಂ ಬಂಗಾರದ ಆಭರಣ, 50 ಸಾವಿರ ನಗದು, ಒಂದು ಸಣ್ಣ ಟೇಬಲ್ ಫ್ಯಾನ್ ಸೇರಿದಂತೆ ಒಟ್ಟು 1.25.500 ರೂ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ತಾಯಿಯ ಆರೋಗ್ಯ ವಿಚಾರಿಸಿ ಮರಳಿ ಮಂಜುಳಾ ಜಾದವ್ ಮನೆಗೆ ಬಂದು ನೋಡಿದಾಗ ಮನೆ ಕಳ್ಳತನವಾದ ಕುರಿತು ಗೊತ್ತಾಗಿದ್ದು, ಕೂಡಲೇ ಉಪನಗರ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿ, ಕದ್ದಿಮರನ್ನು ಹಿಡಿದು ನ್ಯಾಯ ಒದಗಿಸುವಂತೆ ತಿಳಿಸಿದ್ದಾರೆ.