Top NewsUncategorizedಜಿಲ್ಲೆರಾಜಕೀಯ
Trending

ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಮುಖಂಡ ಬಿ.ಟಿ.ಚಂದ್ರಶೇಖರ ಭೋವಿ ಆಕ್ರೋಶ..!

ಮುಂಡಗೋಡ: ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಈ ವೇಳೆ ಸರ್ಕಾರ ಬರಗಾಲ ಘೋಷಿಸಿ, ಪರಿಹಾರವನ್ನು ಮೂಗಿಗೆ ತುಪ್ಪ ಸವರುವಂತೆ ನೀಡಿದೆ. ಇದು ನಾಚಿಕೆ ಗೇಡಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ (ರಿ) ರೈತಬಣದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಟಿ.ಚಂದ್ರಶೇಖರ ಭೋವಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು, ಕೊಬರಿ, ಅಡಿಕೆ, ಭತ್ತ, ರಾಗಿ ಜೋಳ, ಮೆಣಸು, ತೊಗರಿ ಸರಿಯಾದ ಮಳೆಯಿಲ್ಲದೇ ಸರಿಯಾದ ಬೆಳೆ ಬಂದಿಲ್ಲ, ಈ ವೇಳೆ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರಿಗೆ ಎಕರೆಗೆ 2000 ಪರಿಹಾರ ಘೋಷಣೆ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದು ನಾಚಿಕೆಗೇಡು, ಸರ್ಕಾರ ಫೆ.10 ರಂದು ನಡೆಯಲಿರುವ ರಾಜ್ಯದ ಬಜೆಟ್’ನಲ್ಲಿ ರೈತರಿಗೆ ಎಕರೆಗೆ 25000 ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಬರಗಾಲದಿಂದ ಜಾನುವಾರುಗಳಿಗೆ ಮೇವು, ಹೊಟ್ಟಿನ ಸಮಸ್ಯೆ ಉಂಟಾಗಿದೆ. ಕೂಡಲೆ ಸರ್ಕಾರ ಉಚಿತವಾಗಿ ಮೇವು ವಿತರಣೆ ಮಾಡಬೇಕು. ರೈತರ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು. ಇಲ್ಲವಾದರೇ ಫೆ.17 ರಿಂದ ಸಾವಿರಾರು ರೈತರ ಸಮ್ಮುಖದಲ್ಲಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಮುಗೆಶ್ ರತ್ನಪ್ಪ ಲಂಬಾಣಿ, ಮಹಿಳಾ ಜಿಲ್ಲಾಧ್ಯಕ್ಷರಾದ ದುರ್ಗಮ್ಮ ಕೆ ಭೋವಿ, ಮಹಿಳಾ ಉಪಾಧ್ಯಕ್ಷರಾದ ಚೈತ್ರಾ ಮಹಾಂತೇಶ್, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲೇಶ್ ಲಂಬಾಣಿ ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button