ಹುಬ್ಬಳ್ಳಿ: ನಗರದ ಶಿವನಗರದಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಶಿವನಗರದ ಸಂಘದಿಂದ ನಡೆದ ಈ ಗಣರಾಜ್ಯೋತ್ಸವದಲ್ಲಿ ಸ್ಥಳೀಯ ನಿವಾಸಿಗಳು ಭಾಗಿಯಾಗಿ ಧ್ವಜಾರೋಹಣ ನೇರವೇರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಾಗಿ ದೇಶದಲ್ಲಿ ಎಲ್ಲರೂ ಸಹಬಾಳ್ವೆ ನಡೆಸಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಘು ಬಾಗಳೆ, ಉಪಾಧ್ಯಕ್ಷ ನಾಗರಾಜ ಮಗದಿ, ಕಾರ್ಯದರ್ಶಿ ಪ್ರಭು ಸತ್ತಿಗೇರಿ, ಸ್ಥಳೀಯ ಮುಖಂಡರಾದ ಸುಭಾಷ್ ದೊಡ್ಡಮನಿ, ವಸಂತ ಪತ್ತಾರ, ಶೃತಿ ದೊಡ್ಡಮನಿ, ನಿಂಗರಾಜ ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1