ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ, ಇಬ್ಬರ ನಡುವೆ ಮಾರಾಮಾರಿ ಹೊಡೆದಾಡಿಕೊಂಡು ಪೊಲೀಸ್ ಠಾಣೆಗೆ ನುಗ್ಗಿದ ಘಟನೆ ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿನಡೆದಿದೆ.
ಹೌದು, ಹನಮಂತಪ್ಪ ನಿಲಿ ಎಂಬಾತನ ಮೇಲೆ ಮಹೇಶಗೌಡ ಪಾಟೀಲ್ ಹಾಗೂ ಸಹೋದರ ಚಾಕು ಹಿಡಿದುಕೊಂಡು ಮಿನಿ ವಿಧಾನಸೌಧಕ್ಕೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಹನಮಂತಪ್ಪ ನಿಲಿ ಪಕ್ಕದಲ್ಲಿದ್ದ ಉಪನಗರ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ. ಪೊಲೀಸ್ ಠಾಣೆಗೆ ಹೋದ್ರು ಕೂಡ ಮಾರಾಮರಿ ಹೊಡೆದಾಡಿಕೊಂಡಿದ್ದಾರೆ. ಕೂಡಲೆ ಪೊಲೀಸರು ಜಗಳವನ್ನು ಬಿಡಿಸಿ ವಿಚಾರಣೆ ನಡೆಸಿದ್ದಾರೆ. ಮಿನಿ ವಿಧಾನಸೌಧದಲ್ಲೆ ಚಾಕು ಹಿಡಿದುಕೊಂಡು ಹೊಡೆದಾಡುತ್ತಿದ್ದಾರಂದ್ರೆ ಪೊಲೀಸರಂದ್ರೆ ಇವರಿಗೆ ಭಯವಿಲ್ಲದಂತಾಗಿದ್ದು ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.ಅಲ್ಲದೇ ಇಂತಹ ಘಟನೆಗಳು ಆಗಬಾರದೆಂದ್ರೆ ಮಿನಿ ವಿಧಾನ ಸೌದಕ್ಕೇ ಬಿಟ್ ಪೋಲಿಸ್ ಆಯೋಜನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1