Top Newsಅಪರಾಧಜಿಲ್ಲೆ
Trending

ಮನೆಗೆ ಹೋಮ್ ನರ್ಸ್ ನೇಮಕ‌ ಮಾಡಿದ್ದೀರಾ? ಎಚ್ಚರ… ಎಚ್ಚರ…

ಹುಬ್ಬಳ್ಳಿ: ಹೋಮ್ ನರ್ಸ್ ಕೆಲಸದ ನೆಪದಲ್ಲಿ ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿಯ ಬಂಗಾರದ ಬಳೆಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳಿಯನ್ನು ಬಂಧಿಸುವಲ್ಲಿ ವಿದ್ಯಾನಗರದ ಪೋಲಿಸರು ಯಶಸ್ವಿಯಾಗಿದ್ದಾರೆ.

ಜಾಹ್ನವಿ ಅಲಿಯಾಸ್ ಗೀತಾ ಎಂಬಾತಕೆ ಬಳೆ ಕಳ್ಳತನ ಮಾಡಿದ ಆರೋಪಿಯಾಗಿದ್ದು, ಈಕೆ ಇಲ್ಲಿನ ವಿದ್ಯಾನಗರದ ಲಿಂಗರಾಜನಗರದಲ್ಲಿನ ಶಿವಾನಂದ ಕೊಟ್ಟರಶೆಟ್ಟರ ಎಂಬಾತರ ಮನೆಯಲ್ಲಿ ಹೋಮ್ ನರ್ಸ್ ಕೆಲಸಕ್ಕೆ ಸೇರಿಕೊಂಡು ವಯಸ್ಸಾದ ವೃದ್ದೆಯ ಆರೋಗ್ಯ ರಕ್ಷಣೆಯ ನೆಪದಲ್ಲಿ ಡಿ.24 ರಂದು ಮನೆಯಲ್ಲಿಟ್ಟಿದ್ದ ಒಟ್ಟು 6 ಲಕ್ಷ ಮೌಲ್ಯದ ಬಂಗಾರದ ಬೆಳೆಗಳನ್ನು ಕದ್ದು ಪರಾರಿಯಾಗಿದ್ದಳು.

ಈ ಬಗ್ಗೆ ಕುಟುಂಬಸ್ಥರು ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದರು, ಅದರಂತೆ ಕಾರ್ಯಪ್ರವೃತರಾದ ಪೋಲಿಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣೆಯ ಪಿಐ ಜಯಂತ ಗೌಳಿ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಜಿ.ಎನ್.ಕಲ್ಯಾಣಿ ಹಾಗೂ ಸಿಬ್ಬಂದಿಗಳಾದ ಶಿವಾನಂದ ತಿರಕಣ್ಣವರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪರಶುರಾಮ ಹಿರಗಣ್ಣವರ, ಸಯ್ಯದ ಅಲಿ ತಹಶಿಲ್ದಾರ, ರಮೇಶ ಹಲ್ಲೆ, ಮಂಜುನಾಥ ಎಣಗಿ, ಶರಣಗೌಡಾ ಮೂಲಿಮನಿ ತಂಡ ಖಚಿತ ಮಾಹಿತಿ ಮೇರೆಗೆ ಧಾರವಾಡದ ಗಾಂಧಿ ಚೌಕ ಬಳಿಯಲ್ಲಿ ಬಂಧಿಸಿ, 3.50 ಲಕ್ಷದ 4 ಬಂಗಾರದ ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಬಂಧಿತ ಜಾಹ್ನವಿ ಅಲಿಯಾಸ್ ಗೀತಾಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button